Home Crime ಪುತ್ತೂರು : ಲೋಕಾಯುಕ್ತ ದಾಳಿ ಬೆನ್ನಲ್ಲೆ ತಲೆಮರೆಸಿಕೊಂಡ ಪುತ್ತೂರು ತಹಶೀಲ್ದಾರ್‌…!!

ಪುತ್ತೂರು : ಲೋಕಾಯುಕ್ತ ದಾಳಿ ಬೆನ್ನಲ್ಲೆ ತಲೆಮರೆಸಿಕೊಂಡ ಪುತ್ತೂರು ತಹಶೀಲ್ದಾರ್‌…!!

ಪುತ್ತೂರು : ಭೂ ದಾಖಲೆ ಮಾಡಿಕೊಡಲು ಲಂಚ ಕೇಳಿ ಲೋಕಾಯುಕ್ತ ಪೊಲೀಸರ ಕೈಗೆ ಪುತ್ತೂರು ತಹಶಿಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುನಿಲ್‌ ಸಿಕ್ಕಿಹಾಕಿಕೊಂಡಿದ್ದ, ಈ ವೇಳೆ ಆತ ಪುತ್ತೂರು ತಹಶಿಲ್ದಾರ್ ಗೂ ಲಂಚದ ಹಣ ನೀಡಬೇಕು ಎಂದು ಹೇಳಿದ್ದ, ಇದರಿಂದಾಗಿ ಲೋಕಾಯುಕ್ತ ಪೊಲೀಸರು ಪುತ್ತೂರು ತಹಶಿಲ್ದಾರ್ ಎಸ್.ಬಿ. ಕೂಡಲಗಿ ಅವರ ವಿಚಾರಣೆಗೆ ಮುಂದಾಗಿದ್ದರು, ಆದರೆ ತಹಶಿಲ್ದಾರ್ ಕೈಗೆ ಸಿಗದೆ ನಾಪತ್ತೆಯಾಗಿದ್ದರು.

ಇದೀಗ ಮಂಗಳೂರು ಲೋಕಾಯುಕ್ತ ಪೊಲೀಸ್ ಕಚೇರಿಯಲ್ಲಿ ಸೆಪ್ಟೆಂಬರ್ 1ರಂದು ವಿಚಾರಣೆಗೆ ಬರುವಂತೆ ಪುತ್ತೂರು ತಹಶೀಲ್ದಾರ್‌ ಎಸ್.ಬಿ. ಕೂಡಲಗಿಗೆ ನೋಟಿಸ್ ನೀಡಲಾಗಿದೆ. ತಹಶೀಲ್ದಾರ್ ಕಚೇರಿಗೂ ಗೈರುಹಾಜರಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅಕ್ರಮ– ಸಕ್ರಮ ಜಮೀನು ಪರಭಾರೆಗೆ ಎನ್ಒಸಿ ನೀಡಲು ಲಂಚ ಪಡೆದಿದ್ದ ಪುತ್ತೂರು ತಾಲ್ಲೂಕು ಕಚೇರಿ ಭೂಸುಧಾರಣೆ ಶಾಖೆ ಕೇಸ್ ವರ್ಕರ್ ಸುನಿಲ್‌ರನ್ನು ಲೋಕಾಯುಕ್ತ ಪೊಲೀಸರು ಈಚೆಗೆ ಬಂಧಿಸಿದ್ದರು. ಆ ನಂತರ ತಹಶೀಲ್ದಾರ್ ತಲೆಮರೆಸಿಕೊಂಡಿದ್ದಾರೆ.