ಮಂಗಳೂರು: ‘ಸುಫ್ರಂ ಸೋ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಬಿಗ್ ಹಿಟ್ ಕೊಟ್ಟ ನಿರ್ದೇಶಕ ಜೆಪಿ ತುಮಿನಾಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

‘ಸುಫ್ರಂ ಸೋ’ ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟ, ನಿರ್ದೇಶಕ ಜೆಪಿ ತುಮಿನಾಡು ಅವರು ರಶ್ಮಿಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಮಂಗಳೂರಿನ ಪಿಲಿಕುಳದ ಸ್ಕೌಟ್ ಭವನದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕನ್ನಡ ಹಾಗೂ ತುಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ನವಜೋಡಿಗೆ ಎಲ್ಲರೂ ಮನಸಾರೆ ಹರಸಿದ್ದಾರೆ.

ಅಂದಹಾಗೆ ‘ಸುಫ್ರಂ ಸೋ’ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಈ ಚಿತ್ರದ ಮೂಲಕ ಜೆಪಿ ತುಮ್ಮಿನಾಡ್ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ಜೊತೆಗೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಪ್ಪಟ ಕರಾವಳಿ ಪ್ರತಿಭೆಯಾಗಿರುವ ಜೆಪಿ ಸಿನಿಮಾ ರಂಗಕ್ಕೆ ಕಾಲಿಡುವ ಮುಂಚೆ 14 ವರ್ಷ ಅವರು ರಂಗಭೂಮಿಯಲ್ಲಿದ್ದರು. ಅಲ್ಲಿ ನಟನೆ ಜೊತೆಗೆ ನಾಟಕ ರಚನೆ, ನಿರ್ದೇಶನವನ್ನು ಮಾಡಿದ್ದರು.





