Home Karavali Karnataka ದಿಗ್ಬಂಧನದಲ್ಲಿದ್ದ ಎಂಆರ್‌ಪಿಎಲ್‌ ಐವರು ಸಿಬ್ಬಂದಿ ರಕ್ಷಣೆ : ಮಂಗಳೂರು ಕಡೆ ಪಯಣ…!!

ದಿಗ್ಬಂಧನದಲ್ಲಿದ್ದ ಎಂಆರ್‌ಪಿಎಲ್‌ ಐವರು ಸಿಬ್ಬಂದಿ ರಕ್ಷಣೆ : ಮಂಗಳೂರು ಕಡೆ ಪಯಣ…!!

ಮಂಗಳೂರು : ಮಂಗಳೂರಿನ ಹೊರವಲಯದ ಎಂಆರ್‌ಪಿಎಲ್‌ನಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಸಿಬ್ಬಂದಿಗಳ ವಿಚಾರವಾಗ ಸ್ಪಂದನೆ ನೀಡದ ಆರೋಪದಲ್ಲಿ ಕಾರ್ಮಿಕರದಿಂದ ಎಂಆರ್‌ಪಿಎಲ್‌ ಗೇಟ್‌ ಬಳಿ ಪ್ರತಿಭಟನೆ ಮಾಡಲಾಗಿದೆ.

ಇದರ ಮಧ್ಯೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ದಿಗ್ಭಂಧನದಲ್ಲಿದ್ದ ಐವರನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದಾರೆ. ವಿಮಾನದ ಮೂಲಕ ಮಂಗಳೂರಿಗೆ ಬರುತ್ತಿದ್ದಾರೆ.

ಕಾರ್ಮಿಕ ದೀಪ್‌ ಚಂದ್ರ ಭಾರ್ತಿಯಾ ಈ ಘಟನೆಯಲ್ಲಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ವಿಮಾನದಲ್ಲಿ ಅವರ ಕುಟುಂಬದ ಜೊತೆ ಎಂಆರ್‌ಪಿಎಲ್‌ನ ಐವರು ಸಿಬ್ಬಂದಿಗಳಾದ ಪ್ರಸಾದ್‌, ಬಲ್ಬೀರ್‌, ಸುರೇಂದ್‌, ಬಾಲನಾರಾಯಣ್‌ ಮತ್ತು ಪಂಕಜ್‌ ತೆಗೆದುಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ಅವರನ್ನು ದಿಗ್ಭಂಧನ ಮಾಡಲಾಗಿತ್ತು.

ಮ್ಯಾನೇಜ್ಮೆಂಟ್‌ ಸಿಬ್ಬಂದಿಗಳು ಬರದ ಹೊರತು ಇವರನ್ನೆಲ್ಲ ಮಂಗಳೂರಿಗೆ ಕಳಿಸುವುದಿಲ್ಲ ಎಂದು ಮೃತ ದೀಪ್‌ ಚಂದ್ರ ಭಾರ್ತಿಯಾ ಕುಟುಂಬ ಹೇಳಿದ್ದರು. ಈಗಾಗಲೇ ಮ್ಯಾನೇಜರ್‌ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಕುಟುಂಬಸ್ಥರು, ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇತ್ತ ಎಂಆರ್‌ಪಿಎಲ್‌ನ ಸಿಬ್ಬಂದಿ ತಮ್ಮನ್ನೆಲ್ಲ ದಿಗ್ಭಂಧನ ಮಾಡಿದ್ದು, ಕಾಪಾಡವಂತೆ ವಿಡಿಯೋ ಮೂಲಕ ಎಂಆರ್‌ಪಿಎಲ್‌ಗೆ ಮನವಿ ಮಾಡಿದ್ದು, ಸ್ಥಳೀಯ ಪೊಲೀಸರು ಅವರನ್ನು ರಕ್ಷಣೆ ಮಾಡಿ ಐವರು ಸಿಬ್ಬಂದಿ ಮಂಗಳೂರಿನ ಕಡೆಗೆ ಬರುತ್ತಿದ್ದಾರೆ.