ಪಡುಬಿದ್ರಿ : ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತಪಟ್ಟವರು ಪಾದಬೆಟ್ಟು ಗ್ರಾಮದ ನಿವಾಸಿ ಸುಮತಿ ಎಂದು ತಿಳಿದು ಬಂದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ರವಿ (38), ಪಾದೆಬೆಟ್ಟು ಗ್ರಾಮ, ಕಾಪು ಇವರ ತಾಯಿ ಸುಮತಿ (65) ರವರಿಗೆ 7 ವರ್ಷಗಳ ಹಿಂದೆ ಗರ್ಭಕೋಶದ ಸರ್ಜರಿಯಾಗಿದ್ದು, ಮನೆಯಲ್ಲಿಯೇ ಇರುತ್ತಿದ್ದರು, ದಿನಾಂಕ: 30/08/2025 ರಂದು ಮನೆಯಲ್ಲಿ ಊಟ ಮಾಡಿ ಎಂದಿನಂತೆ ತನ್ನ ಗಂಡ ರಾಮ ರವರೊಂದಿಗೆ ತಮ್ಮ ಕೋಣೆಯಲ್ಲಿ ಮಲಗಿದ್ದವರು 2:00 ಗಂಟೆಯ ಸುಮಾರಿಗೆ ರಾಮ ರವರು ಎಚ್ಚರವಾಗಿ ನೋಡಲಾಗಿ ಸುಮತಿ ರವರು ಎಲ್ಲಿಯೂ ಕಾಣದೇ ಇದ್ದು ಬಳಿಕ ಪಿರ್ಯಾದಿದಾರರು ಮತ್ತು ಮನೆಯವರೆಲ್ಲ ಸೇರಿ ಹುಡುಕಾಡಲಾಗಿ 4:45 ಗಂಟೆಯ ಸುಮಾರಿಗೆ ಮನೆಯ ಪಕ್ಕದ ದನದ ಹಟ್ಟಿಯಲ್ಲಿನ ಮರದ ಅಡ್ಡಜಂತಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದು ಕೆಳಗೆ ಇಳಿಸಿ ನೋಡಲಾಗಿ ಸುಮತಿ ರವರು ಮಾತನಾಡದೇ ಇದ್ದು, ಯಾವುದೇ ಉಸಿರಾಟದ ಸ್ಪಂದನೇ ಇಲ್ಲದೇ ಇದ್ದು ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿಯವರು ಸುಮತಿಯವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2025, ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.