ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ವ್ಯಕ್ತಿಯೋರ್ವರು ಮನೆಯಲ್ಲಿ ದೇವರಕೋಣೆಯ ಮದ್ಯದ ಬಿದುರಿನ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಶರಣಾದವರು ತನಿಯಪ್ಪ ಪೂಜಾರಿ ಎಂದು ತಿಳಿಯಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಚೈತ್ರಾ ಪ್ರಾಯ: 26 ವರ್ಷ, ತಂದೆ: ಹೊನ್ನಪ್ಪ ಪೊಜಾರಿ ವಾಸ: ಆರ್ತಿಲ ಮನೆ, ಉಪ್ಪಿನಂಗಡಿ ಗ್ರಾಮ ಮತ್ತು ಅಂಚೆ ,ಪುತ್ತೂರು ತಾಲೂಕು ಎಂಬವರ ದೂರಿನಂತೆ ತನ್ನ ತಂದೆ: ಹೊನ್ನಪ್ಪ ಪೂಜಾರಿ, ಪ್ರಾಯ: 56 ವರ್ಷ, ತಂದೆ: ದಿ| ತನಿಯಪ್ಪ ಪೂಜಾರಿ,ವಾಸ: ಅರ್ತಿಲ ಮನೆ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು. ಉಪ್ಪಿನಂಗಡಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದು, ಅವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಪತ್ನಿ ಮಕ್ಕಳು ಬೇರೆ ಬೇರೆ ಕೆಲಸಕ್ಕೆ ಹೋಗುತ್ತಿದ್ದು, ಅದರಂತೆ ದಿನಾಂಕ: 30-08-2025 ರಂದು ಎಲ್ಲರೂ ಬೆಳಿಗ್ಗೆ 08.00 ಗಂಟೆಗೆ ಮನೆಯಿಂದ ಅವರವರ ಕೆಲಸಕ್ಕೆ ಹೋಗಿದ್ದು, ಹೊನ್ನಪ್ಪ ಪೂಜಾರಿಯವರು ಕೂಡ ಮನೆಯಿಂದ ಹೋಗಿರುತ್ತಾರೆ. ಸಂಜೆ 5.45 ಗಂಟೆಗೆ ಮೃತರ ಪತ್ನಿ ಪುಷ್ಪ ರವರು ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಎದುರು ಬಾಗಿಲು ಮುಚ್ಚಿಕೊಂಡು ಭದ್ರಪಡಿಸಿದ್ದು, ತೆರೆದಿದ್ದ ಹಿಂಬದಿ ಬಾಗಿಲಿನ ಮೂಲಕ ಕಒಲಗೆ ಹೋಗಿ ನೋಡಿದಾಗ ದೇವರಕೋಣೆಯ ಮದ್ಯದ ಬಿದುರಿನ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 47/2025 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ