Home Karavali Karnataka 15 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆಂಚನೂರು ಇದರ ಸಂಭ್ರಮ…!!

15 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆಂಚನೂರು ಇದರ ಸಂಭ್ರಮ…!!

ಬೈಂದೂರು : 15 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕೆಂಚನೂರು(ಕಾಮುಕಟ್ಟೆ) .ದೇವಲ್ಕುಂದ,ಕರ್ಕುಂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಲ್ಲಿ ನಡೆಯಿತು.

15ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ ಗಣೇಶನ ವಿಗ್ರಹವನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಕಲಶ ಸ್ಥಾಪಿಸಿ, ಅರಿಶಿನ, ಕುಂಕುಮ, ಗಂಧ, ಗರಿಕೆ, ಹೂವು, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಬೆಲ್ಲ, ಫಲಪುಷ್ಪ, ಮೋದಕ ನೈವೇದ್ಯ ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಪೂಜೆಯು ಕಾಯಾ, ವಾಚಾ, ಮನಸಾ, ಶೋಡಶೋಪಚಾರ ವಿಧಾನದಲ್ಲಿ, ಗಣೇಶನಿಗೆ ಅರ್ಘ್ಯ, ಪಾದ್ಯ, ಅಭಿಷೇಕ, ಧೂಪ, ದೀಪ, ನೈವೇದ್ಯ, ಮತ್ತು ಫಲಾಹಾರಗಳನ್ನು ಅರ್ಪಿಸುವುದರ ಮೂಲಕ ಸಂಭ್ರಮದಲ್ಲಿ ಜರಗಿತು.

ಹನುಮಗಿರಿ ಮೇಳ ಮತ್ತು ಯಕ್ಷ ನಕ್ಷತ್ರ ಟ್ರಸ್ಟ್ (ರಿ.) ಕಿರಾಡಿ ಹಾಗೂ ತೆಂಕು – ಬಡಗಿನ ಅಗ್ರಪಂಥಿಯ ಕಲಾವಿದರ ಕೂಡುವಿಕೆಯಲ್ಲಿ
ಪ್ರಚಂಡ ಸ್ಪರ್ಧೆಯ ಕೂಡಟ ದೇವ ಸಂಕಲ್ಪ ಮತ್ತು
ರಾಜ್ಯ ಪ್ರಶಸ್ತಿ ವಿಜೇತ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಹಲವಾರು ರಿಯಾಲಿಟಿ ಶೋನಲ್ಲಿ ಮಿಂಚಿದ ಅತ್ಯತ್ತುಮ ನೃತ್ಯ ತಂಡೆ STEP & STYLE DANCE STUDIO SASTHANA
ಇವರಿಂದ ನೃತ್ಯ ಸಿಂಚನ ಹಾಸುಕಿತಂದ ಗಾನ ಗಾಯನ ತದನಂತರ ದೇವರಿಗೆ ವಿಶೇಷ ಪೂಜೆ ಭವ್ಯ ಮೆರವಣಿಗೆ ಮೂಲಕ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು: ರಘುರಾಮ್ ಗಾಣಿಗ ಮಲ್ಲಾರಿ, ಅಧ್ಯಕ್ಷರು ಗೋಪಾಲ ನಾಯ್, ಕಾರಾಳ
ಕಾರ್ಯದರ್ಶಿ : ಜಯಂತ್ ಕುಂದರ್, ಬಾಳಿಕೆರೆ,ಅರ್ಚಕರು: ಸುಬ್ರಹ್ಮಣ್ಯ ಭಟ್ (ಶಂಕರಪ್ಪನಕೊಡ್ಲು )
ರವಿ ಗಾಣಿಗ ಕೆಂಚನೂರು,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆಂಚನೂರು ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.