Home Karavali Karnataka ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರ್- 11 ಇದರ 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮ…!!

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರ್- 11 ಇದರ 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮ…!!

ಬೈಂದೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರ್ -11 ಇದರ 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮ ನಡೆಯಿತು.

ಗಣೇಶೋತ್ಸವ ಸಂಭ್ರಮದಲ್ಲಿ ಗಣೇಶನ ವಿಗ್ರಹವನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಕಲಶ ಸ್ಥಾಪಿಸಿ, ಅರಿಶಿನ, ಕುಂಕುಮ, ಗಂಧ, ಗರಿಕೆ, ಹೂವು, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಬೆಲ್ಲ, ಫಲಪುಷ್ಪ, ಹಾಗೂ 21 ಮೋದಕಗಳನ್ನು ನೈವೇದ್ಯ ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಪೂಜೆಯು ಕಾಯಾ, ವಾಚಾ, ಮನಸಾ, ಶೋಡಶೋಪಚಾರ ವಿಧಾನದಲ್ಲಿ, ಗಣೇಶನಿಗೆ ಅರ್ಘ್ಯ, ಪಾದ್ಯ, ಅಭಿಷೇಕ, ಧೂಪ, ದೀಪ, ನೈವೇದ್ಯ, ಮತ್ತು ಫಲಾಹಾರಗಳನ್ನು ಅರ್ಪಿಸುವುದರ ಮೂಲಕ ಸಂಭ್ರಮದಲ್ಲಿ ಜರಗಿತು.

ಶ್ರೀ ಪ್ರದೀಪ ಕುಮಾರ ಶೆಟ್ಟಿ ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರು-11 ಅವರು ಮಾತನಾಡಿ ಈ ಗಣೇಶೋತ್ಸವು ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ರಜತಮೋತ್ಸವದ ಪೂರ್ವಭಾವಿಯಾಗಿ ಸಾಂಸ್ಕೃತಿಕ ಮತ್ತು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ವಿಜೇತ ತಂಡಗಳಿಗೆ
ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಕಲ್ಕಕ್ಕಿ ಅಧ್ಯಕ್ಷರು, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಬಹುಮಾನವನ್ನು ವಿತರಿಸಿದರು.

ಕರವಳಿ ಯಕ್ಷಗಾನದ ಮಾಣಿಕ್ಯ ರಾಘವೇಂದ್ರ ಆಚಾರ್ಯ ಮಾತನಾಡಿ ಈ ಒಂದು ಗ್ರಾಮೀಣ ಪ್ರದೇಶದಲ್ಲಿ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ ಇವತ್ತು 25 ವರ್ಷಗಳ ಪೂರೈಸಿ ಮುಂದಿನ ದಿನಗಳಲ್ಲಿ 50ರ ಸಂಭ್ರಮವು ಇನ್ನೂ ಅದ್ದೂರಿಯಾಗಿ ನಡೆಯಲಿ ಎಂದರು.

ಸ. ಹಿ. ಪ್ರಾ ಶಾಲೆ, ಉಳ್ಳೂರು -11ಇಲ್ಲಿಯ ಶಾಲಾ ಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಕಾರ್ಯಕ್ರಮ ಮತ್ತು
ಯಕ್ಷ ರಾಘವ ಪ್ರತಿಷ್ಠಾನ (ರಿ) ಜನ್ಸಾಲೆ, ಸಿದ್ದಾಪುರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜನ್ಸಾಲೆ ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ ಯಕ್ಷಗಾನ ಇತಿ ಕಿಡಿಕಾಡು ವಿಷ್ಣು ಭಟ್ ವಿರಚಿತಪ್ರಸಂಗ :ಓಂ ನಮಃ ಶಿವಾಯ ಯಕ್ಷಗಾನ ನಡೆಯಿತು.

ಈ ಸಂದರ್ಭದಲ್ಲಿ ಗೀತಾ ಶೆಟ್ಟಿ, ಅಧ್ಯಕ್ಷರು ಗ್ರಾ. ಪಂ. ಹೇರೂರು,ರಾಮ ಪೂಜಾರಿ ಅನ್ನದಾನದ ಸೇವಕರು,
ರವೀಂದ್ರ ಉಡುಪ ಅರ್ಚಕರು ಮೂಡುಮಠ ಉಳ್ಳೂರು-11,
ಸೂಲಿಯಣ್ಣ ಶೆಟ್ಟಿ,ಸುಶೀಲ ಆಚಾರ್ಯ,ಕರಿಯಣ್ಣ ಶೆಟ್ಟಿ,
ಸಮರ ಶೆಟ್ಟಿ,ಶೇಖರ ಪೂಜಾರಿ,ಚಂದ್ರೇಶ್ ಶೆಟ್ಟಿ,ಶ್ರೀಮತಿ ದುರ್ಗಿ,ಪೂಜಾರಿ ರಾಘವೇಂದ್ರ ಶೆಟ್ಟಿ,ಸವಿತಾ ದೇವಾಡಿಗ,
ಗೋಪಾಲ ಪೂಜಾರಿ, ಕೃಷ್ಣಯ್ಯ ಆಚಾರ್ಯ,

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸಿತರಿದ್ದರು

ದಿನೇಶ್ ಆಚಾರ್ಯ ಸ್ವಾಗತಿಸಿದರು ಭಾಸ್ಕರ್ ದೇವಾಡಿಗ ನಿರೂಪಿಸಿದರು ಅರುಣ್ ಗಾಣಿಗ ವಂದಿಸಿದರು.