ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದವರು ಹಂಗಳೂರು ಗ್ರಾಮದ ನಿವಾಸಿ ಶ್ರೀಷ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಶ್ರೀಧರ (65), ಹಂಗಳೂರು ಗ್ರಾಮ ಕುಂದಾಪುರ ಇವರ ಮಗ ಶ್ರೀಷ (28) ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆಯಲ್ಲಿ ಕೆಲಸಮಾಡುತ್ತಿದ್ದವರು ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸುತ್ತಿದ್ದು ಒಂದು ವರ್ಷದ ಹಿಂದೆ ಶಾಸ್ರ್ತಿ ಪಾರ್ಕ್ ಸಮೀಪ ಪ್ಲೈಒವರ್ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಗೆ ಹಾರಿ ಕೈಕಾಲು ಪೆಟ್ಟಾಗಿದ್ದು ಚಿಕಿತ್ಸೆ ಕೊಡಿಸಿ ಗುಣಮುಖವಾಗಿರುತ್ತದೆ. ದಿನಾಂಕ 28/08/2025 ರಂದು ವಿಪರೀತ ಮಳೆ ಕಾರಣ ಶಾಲಾ ಕಾಲೇಜು ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದು ಮಧ್ಯಾಹ್ನ 1:30 ಗಂಟೆಗೆ ಊಟ ಬಡಿಸಲು ಕರೆದಾಗ ಏಲ್ಲಿಯೋ ಕಾಣದೇ ಇದ್ದು ಮನೆಯ ಬಾವಿ ನೋಡಿದಾಗ ಬಾವಿಯಲ್ಲಿ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಬೇಕರಿಯಿಂದ ಮನೆಗೆ ಹೋಗಿ ಮಗನನ್ನು ಮೇಲೆತ್ತಿದ್ದಾಗ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.