Home Karavali Karnataka ಸ್ನೇಹ ಸಂಘ ಹೊಸಪೇಟೆ – ತ್ರಾಸಿ 30 ನೇ ವರ್ಷದ ಸಂಭ್ರಮದ ಗಣೇಶೋತ್ಸವ…!!

ಸ್ನೇಹ ಸಂಘ ಹೊಸಪೇಟೆ – ತ್ರಾಸಿ 30 ನೇ ವರ್ಷದ ಸಂಭ್ರಮದ ಗಣೇಶೋತ್ಸವ…!!

ಕುಂದಾಪುರ : ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಹೊಸಪೇಟೆ ನಿವಾಸಿಗಳು ಕಳೆದ 30 ವರ್ಷಗಳಿಂದ ನಿರಂತರ ಸ್ನೇಹ ಸಂಘ ರಿ ವತಿಯಿಂದ ಗಣೇಶೋತ್ಸವ ಸಂಭ್ರಮದಿಂದ ಆಚರಿಸಿಕೊಂಡು ಬಂದಿರುತ್ತದೆ,

ಅದರಂತೆ ಈ ವರ್ಷ 30ನೇ ವರ್ಷದ ಗಣೇಶೋತ್ಸವ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗುತ್ತಿದೆ,
27 ರಿಂದ 29 ರ ತನಕ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಸಾರ್ವಜನಿಕ ಅನ್ನ ಸಂತರ್ಪಣೆ , ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಈ ಎಲ್ಲಾ ಶ್ರೀ ದೇವರ ಕಾರ್ಯಕ್ರಮಕ್ಕೆ ಊರ ಪರ ಊರ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀದೇವರ ಕಾರ್ಯಕ್ರಮ ಸಡಗರ ಸಂಭ್ರಮದಿಂದ ವಿಜ್ರಂಬಣೆಯಿಂದ ನಾಳೆಯ ದಿನ 29- 08- 2025 ರಂದು ಸಂಪನ್ನಗೊಳ್ಳಲಿದೆ

29 ರ ಸಂಜೆ 4 ಗಂಟೆಗೆ ಶ್ರೀ ಗಣಪತಿ ದೇವರ ಮೂರ್ತಿಯನ್ನು ಪುರ ಮೆರವಣಿಗೆಯ ಮೂಲಕ ಭಕ್ತಿ ಭಾವ ಸಂಗೀತದಿಂದ ಜೈಕಾರ ಕೂಗಿ ಜಲ ಸ್ತಂಭನ ಮಾಡಲಾಗುತ್ತದೆ ಎಂದು ಸ್ನೇಹ ಸಂಘದ ಆಡಳಿತ ಮಂಡಳಿ ಮಾಧ್ಯಮಕ್ಕೆ ಹೇಳಿದ್ದಾರೆ

ಶ್ರೀ ಗಣೇಶೋತ್ಸವ ಪುರ ಮೆರವಣಿಗೆಗೆ ಶ್ರೀ ಗಣೇಶ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.