ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ಮಹಿಳೆಯೊಬ್ಬರು ಮನೆಯ ಒಳಗಿನ ಕೋಣೆಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆ ಶಫ್ರೀನಾ ಬಾನು ಎಂದು ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಪ್ರಕರಣದ ಸಾರಾಂಶ :
ಪಿರ್ಯಾದಿದಾರರಾದ ನವಾಝ್ ರವರು ಕಳೆದ 14 ವರ್ಷಗಳ ಹಿಂದೆ ಶಫ್ರೀನಾ ಬಾನು (31 ವರ್ಷ) ಎಂಬುವರನ್ನು ಮದುವೆಯಾಗಿ ಅವರಿಗೆ ಇಬ್ಬರು ಮಕ್ಕಳಿದ್ದು, ಪಿರ್ಯಾದಿದಾರರಿಗೆ ಹಾಗೂ ಅವರ ಪತ್ನಿಗೆ ಪರಿಚಯವಿರುವ ಆಟೋ ಚಾಲಕ ಪುತ್ತಿಗೆ ನಿವಾಸಿ ಅಶ್ರಫ್ ಎಂಬಾತನು ಕಳೆದ 7 ತಿಂಗಳ ಹಿಂದೆ ಪಿರ್ಯಾದಿದಾರರ ಪತ್ನಿಯಿಂದ ರೂ 2 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದು, ಶಫ್ರೀನಾ ಬಾನು ರವರು ಆತನಲ್ಲಿ ಹಲವಾರು ಬಾರಿ ಕೇಳಿದರೂ ಆತನು ‘ಇವತ್ತು ಕೊಡುತ್ತೇನೆ-ನಾಳೆ ಕೊಡುತ್ತೇನೆ’ ಎಂದು ಹೇಳುತ್ತಾ ದಿನಾಂಕ 26/08/2025 ರಂದು ಖಂಡಿತವಾಗಿಯೂ ಕೊಡುತ್ತೇನೆ ಎಂದು ಹೇಳಿದ್ದವನು ಬೆಳಿಗ್ಗೆ 06.00 ಗಂಟೆಗೆ ಶಫ್ರೀನಾ ಬಾನು ರವರ ಫೋನ್ ಗೆ ಕರೆ ಮಾಡಿ “ಒಂದೋ ನೀನು ನನಗೆ ಇನ್ನೂ ಕಾಲಾವಕಾಶಬೇಕು ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು ಒಡವೆಗೆ ಏನು ಫ್ರೂಫ್ ಇದೆ” ಎಂದು ಉಡಾಫೆಯಾಗಿ ಮಾತನಾಡಿದ್ದು ಆತನ ದುಷ್ಪ್ರೇರಣೆಯಿಂದಲೇ ಬೆಳಿಗ್ಗೆ 7.00 ಗಂಟೆ ಯಿಂದ 07.45 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಶಫ್ರೀನಾ ಬಾನು ರವರು ಮನೆಯ ಒಳಗಿನ ಕೋಣೆಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬಿತ್ಯಾದಿ