Home Crime ಉಳ್ಳಾಲ : ಮಾದಕ ವಸ್ತು ಸೇವನೆ : ಓರ್ವ ವಶಕ್ಕೆ….!!

ಉಳ್ಳಾಲ : ಮಾದಕ ವಸ್ತು ಸೇವನೆ : ಓರ್ವ ವಶಕ್ಕೆ….!!

ಉಳ್ಳಾಲ : ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್‌ ಶಾಪಿ ಎಂದು ಗುರುತಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ.26-08-2025 ರಂದು 11.00 ಗಂಟೆಯ ಸಮಯಕ್ಕೆ ಉಳ್ಳಾಲ ತಾಲುಕು ಉಳ್ಳಾಲ ಗ್ರಾಮದ ಉಳ್ಳಾಲ ಬೀಚ್ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೊಹಮ್ಮದ್ ಶಾಫಿ @ ಶಾಫಿ, ಪ್ರಾಯ: 27 ವರ್ಷ, ತಂದೆ:ಅಬ್ದುಲ್ ಹಮೀದ್, ವಾಸ:ಸಫ್ವಾನ್ ಮಂಜಿಲ್, ಮೇಲಂಗಡಿ ದರ್ಗಾದ ಬಳಿ, ಉಳ್ಳಾಲ ಗ್ರಾಮ, ಉಳ್ಳಾಲ ತಾಲೂಕು ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ ಸಂತೋಷ್ ಕುಮಾರ್ ಡಿ ರವರು ಸಿಬ್ಬಂದಿಯವರ ಜೊತೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ಕೋಟೆಕಾರು ಗ್ರಾಮದ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿದಾಗ ಮೊಹಮ್ಮದ್ ಶಾಫಿ @ ಶಾಫಿ (27 ವರ್ಷ) ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ (ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ನೀಡಿರುವುದರಿಂದ ಆರೋಪಿ ಮೊಹಮ್ಮದ್ ಶಾಫಿ @ ಶಾಫಿ (27 ವರ್ಷ) ಎಂಬಾತನ ವಿರುದ್ಧ ದಿನಾಂಕ.26.08.2025 ರಂದು ದಾಖಲಿಸಿದ ಪ್ರಕರಣದ ಸಾರಾಂಶ.