Home Crime ಪಡುಬಿದ್ರಿ: ಸ್ಕೂಟಿಗೆ ಅಡ್ಡ ಬಂದ ನಾಯಿ : ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದ ಸಾಮಾಜಿಕ ಕಾರ್ಯಕರ್ತ...

ಪಡುಬಿದ್ರಿ: ಸ್ಕೂಟಿಗೆ ಅಡ್ಡ ಬಂದ ನಾಯಿ : ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಚಿಕಿತ್ಸೆ ಫಲಿಸದೆ ಮೃತ್ಯು…!!

ಪಡುಬಿದ್ರಿ : ಸ್ಕೂಟಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಇಂದು ನಡೆದಿದೆ.

ಮೃತ ವ್ಯಕ್ತಿ ಉಮಾನಾಥ ಇವರು ಸಾಮಾಜಿಕ ಕಾರ್ಯಕರ್ತರಾಗಿದ್ದು ,ಅಬ್ಬೇಡಿ ಸುಜ್ಲಾನ್ ಕಾಲೋನಿ ನಿವಾಸಿಯಾಗಿದ್ದಾರೆ.ಆ.12 ರಂದು ರಾ.ಹೆ.66 ರಲ್ಲಿ ಹೆಜಮಾಡಿ ಗ್ರಾಮದ ಥೀಮ್‌ ಪ್ಯಾಲೇಸ್‌ ಹಾಲ್‌ ಎದುರು ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗುವಾಗ ನಾಯಿಯೊಂದು ಏಕಾಏಕಿ ಸ್ಕೂಟಿಗೆ ಅಡ್ಡ ಬಂದ ಪರಿಣಾಮ ಉಮಾನಾಥರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿತ್ತು. ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಉಮಾನಾಥರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.