Home Latest ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 49ನೇ ವಾರ್ಷಿಕ ಸಾಮಾನ್ಯ ಸಭೆ…!!

ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 49ನೇ ವಾರ್ಷಿಕ ಸಾಮಾನ್ಯ ಸಭೆ…!!

ಬೈಂದೂರು :  ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.

ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಮಾತನಾಡಿ,ಸಂಘದ 49ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿರುವುದು ಮಹತ್ತರವಾದ ಬೆಳವಣಿಗೆ ಆಗಿದೆ.ಸಂಘದ ಸದಸ್ಯರ ಅನುಕೂಲಕ್ಕಾಗಿ ಹಾಲು ಸಂಗ್ರಹಣಾ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಂಘದ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದೆ.ಆರೋಗ್ಯ ಮಾಹಿತಿ ಸಹಿತ ಉತ್ತಮ ಹಾಲು ಉತ್ಪಾದಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಕೂಡ ಮಾಡಲಾಗಿದೆ ಎಂದರು. ಸಂಘವು ಪ್ರಸ್ತುತ ಸಾಲಿನಲ್ಲಿ 290000 ಲಾಭಗಳಿಸಿದ್ದು. ಹಾಲು ಉತ್ಪಾದಕ ಸದಸ್ಯರಿಗೆ 65% ಬೋನಸ್‌ ಹಾಗೂ ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಿದರು.ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವಂತ ನಾಯರಿ ಅವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು.ಅಧ್ಯಕ್ಷರು ಸಂಘದಸದಸ್ಯರಿಂದ ಅನುಮೋದನೆ ಪಡೆದು ಕೊಂಡು.ಸಂಘದ ಸದಸ್ಯರಿಗೆ 15% ಡಿವಿಡೆಂಡ್ ಮತ್ತು ಸಂಘದ ಹಾಲು ಉತ್ಪಾದಕರಿಗೆ 65% ಬೋನಸ್ ಘೋಷಣೆ ಮಾಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಸರ್ವ

ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಂಗವಾಗಿ ಸಂಘದ ಸದಸ್ಯರಿಗೆ ಉಡುಗೊರೆಯನ್ನು ನೀಡಲಾಯಿತು.

ಆರೋಗ್ಯ ಮಾಹಿತಿ ಪ್ರಯುಕ್ತ ಸಂಘದ ಸದಸ್ಯರಿಗೆ ಬಿ.ಪಿ ಮತ್ತು ರಕ್ತ ಪರೀಕ್ಷೆ ಮಾಡಲಾಯಿತು.

ಒಕ್ಕೂಟದ ವ್ಯವಸ್ಥಾಪಕರಾದ ಶ್ರೀ ಶಂಕರ್ ನಾಯ್ಕ ಪಶು ಆರೋಗ್ಯದ ಆಹಾರದ ಬಗ್ಗೆ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ವಿಸ್ತಾರಣಾಧಿಕಾರಿಗಳಾದ ರಾಜಾರಾಮ್,
ಸಂಘದ ಉಪಾಧ್ಯಕ್ಷೆ ಶಾರದ ದೇವಾಡಿಗ, ನಿರ್ದೇಶಕರಾದ ಪದ್ಮನಾಭ ಹೆಬ್ಬಾ‌ರ್ .ಕೆ ಗೋಪಾಲ ದೇವಾಡಿಗ,ನೀಲು ಯಾನೆ ಸರೋಜಾ,ಸುಬ್ಬು,ಸರೋಜ, ಸುಮಂಗಲ ಕಾರಂತ,ವಿಶಾಲ
ಸಿಬ್ಬಂದಿಗಳಾದ ಸಂತೋಷ್ ದೇವಾಡಿಗ ಪ್ರಕಾಶ್ ನಾಯರಿ,ಶಾಂತದಿನೇಶ್ ಪೂಜಾರಿ,
ಉಪಸ್ಥಿತರಿದ್ದರು.

ಪದ್ಮನಾಭ ಹೆಬ್ಬಾ‌ರ್ ಸ್ವಾಗತಿಸಿದರು.ವಿಶಾಲ ದೇವಾಡಿಗ ಪ್ರಾರ್ಥಿಸಿದರು.ಉಪಾಧ್ಯಕ್ಷೆ ಶಾರದ ವಂದಿಸಿದರು.