ಉಡುಪಿ : ಇತ್ತೀಚೆಗಷ್ಟೇ ಕೊಡಗು ಜಿಲ್ಲೆಗೆ ವರ್ಗಾವಣೆಯಾದ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶ್ರೀ ಸಂದೀಪ್ ಜಿ ಅವರನ್ನು ಮತ್ತೆ ಉಡುಪಿ ಜಿಲ್ಲೆಗೆ ಮರುವರ್ಗಾವಣೆ ಮಾಡಿರುವ ಈ ನಿರ್ಧಾರವು ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮುಖಂಡರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಶ್ರೀ ಸಂದೀಪ್ ಜಿಯವರು ಕಳೆದ ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಹಲವಾರು ಗಣಿ ಮಾಫಿಯಾ ಪ್ರಕರಣಗಳಿಗೆ ಪಾಶ್ರಯ ನೀಡಿದ ಹಿನ್ನೆಲೆ ಇದೆ. ಇವರ ಮರುವರ್ಗಾವಣೆ, ಜಿಲ್ಲಾ ಮಟ್ಟದ ಪ್ರಾಮಾಣಿಕ ಅಧಿಕಾರಿಗಳ ನಿರೀಕ್ಷೆಯ ವಿರುದ್ಧವಾದುದಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ನಿಷ್ಠೆಗಿಂತ ಮೇಲಿರುವ ಆಡಳಿತ ವ್ಯವಸ್ಥೆಗೆ ಧಕ್ಕೆ ತರುತ್ತದೆ.
ಈ ಹಿನ್ನೆಲೆಯಲ್ಲಿ: ಉಡುಪಿ ಜಿಲ್ಲೆಗೆ ಹೊಸ, ಪ್ರಾಮಾಣಿಕ ಹಾಗೂ ತಟಸ್ಥ ಅಧಿಕಾರಿ ನೇಮಕ ಮಾಡಬೇಕು
ಪಕ್ಷದ ಕಾರ್ಯಕರ್ತರಲ್ಲಿ ನ್ಯಾಯ ಮತ್ತು ಆತ್ಮವಿಶ್ವಾಸ ಉಳಿಸಿ ಕೊಳ್ಳಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವವರು ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ನಿರ್ಧಾರದ ವಿರುದ್ಧ ರಾಜ್ಯದ ಉಸ್ತುವಾರಿ ಸಚಿವರಿಗೆ, ಗಣಿ ಸಚಿವರಿಗೆ ಹಾಗೂ ಎಐಸಿಸಿ ನಾಯಕರಿಗೂ ಸಹ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಾಧ್ಯಕ್ಷರು ಪ್ರಖ್ಯಾತ್ ಶೆಟ್ಟಿರವರು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕ್ರಷ್ಣ ಶೆಟ್ಟಿ ಬಜಗೋಳಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಹಾಗೂ ಕಾಪು ಯುವ ಕಾಂಗ್ರೆಸ್ ಮುಖಂಡರಾದ ನವೀನ್ ಸಾಲ್ಯಾನ್ ಹಾಗೂ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಮಮತಾ ಜಿ ನಾಯಕ್ ಹಾಗೂ ಹಲವು ಕಾಂಗ್ರೆಸ್ ಹಿರಿಯ ಕಿರಿಯ ಮುಖಂಡರು ಉಡುಪಿ ಜಿಲ್ಲಾ ಎಲ್ಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ವಿರೋಧವ್ಯಕ್ತಪಡಿಸಿದರು.

