Home Crime ಉಡುಪಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಉಡುಪಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಉಡುಪಿ: ನಗರದ ಸಮೀಪ ಮಲ್ಪೆಯಲ್ಲಿ ಬೋಟಿನಲ್ಲಿ ಬರುವ ಮೀನುಗಳನ್ನು ಖಾಲಿ ಮಾಡುವ ಕೆಲಸ ಮಾಡಿತ್ತಿದ್ದ ವ್ಯಕ್ತಿಯೊಬ್ಬರು ‌ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರು ಧನ್ ರಾಜ್ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಧನ್ಪಾಲ್ (40), ಕುತ್ಪಾಡಿ ಉಡುಪಿ ಇವರ ಅಣ್ಣ ಧನ್‌ರಾಜ್‌(43) ರವರು ಮಲ್ಪೆಯಲ್ಲಿ ಬೋಟಿನಲ್ಲಿ ಬರುವ ಮೀನುಗಳನ್ನು ಖಾಲಿ ಮಾಡುವ ಕೆಲಸವನ್ನು ಮಾಡಿಕೊಂಡಿದ್ದು, ಧನ್‌ರಾಜ್‌ ರವರು ದಿನಾಂಕ 22/08/2025 ರಂದು ಮಧ್ಯಾಹ್ನ 12:30 ಗಂಟೆಗೆ ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ ನಂತರ ಅವರ ಮೊಬೈಲ್‌ ಗೆ ಕರೆಮಾಡಿದಾಗ ಸ್ವಿಚ್‌ ಆಫ್‌ ಬರುತ್ತಿದ್ದು, ಧನ್‌ರಾಜ್‌ ರವರ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 157/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.