Home Crime ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 8 ಮಂದಿ ಅರೆಸ್ಟ್…!!

ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 8 ಮಂದಿ ಅರೆಸ್ಟ್…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ರೋಹಿತ್ ಶೆಟ್ಟಿ, ಚರಣ್ ರಾಜ್ , ದಿನೇಶ್ ರಾವ್, ಅರ್ಜುನ್, ಮಂಜುನಾಥ್, ಪ್ರಶಾಂತ, ದಯಾನಂದ ಪೂಜಾರಿ , ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದೆ.

ಪೊಲೀಸರು ಕೋಳಿ ಅಂಕಕ್ಕೆ ‌ಬಳಸಲಾದ ಕೋಳಿಗಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ 22/08/2025 ರಂದು 17:00 ಗಂಟೆಗೆ ಆರೋಪಿತರು 1)ರೋಹಿತ್ ಶೆಟ್ಟಿ2)ಚರಣ್ ರಾಜ್ 3)ದಿನೇಶ್ ರಾವ್4)ಅರ್ಜುನ್5) ಮಂಜುನಾಥ್6)ಪ್ರಶಾಂತ 7) ದಯಾನಂದ ಪೂಜಾರಿ 8)ಸಂತೋಷ ಶೆಟ್ಟಿ ಇವರುಗಳು ಹೆಬ್ರಿ ತಾಲೂಕು ಬೆಳಂಜೆ ಗ್ರಾಮದ ಮಾಬ್ಳಿ ಎಂಬಲ್ಲಿ ಹಾಡಿಯಲ್ಲಿ ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕ ಆಟ ಅಡುತ್ತಿದ್ದು ಈ ಸಮಯ ಪಿರ್ಯಾದುದಾರ ಶಂಭುಲಿಂಗಯ್ಯ ಎಮ್‌,ಇ ಪಿಎಸ್ಐ ಶಂಕರನಾರಾಯಣ ಪೊಲೀಸ್ ಠಾಣೆ ರವರು ಖಚಿತ ಮಾಹಿತಿ ಯಂತೆ ಸಿಬ್ಬಂದಿಗಳೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಯಿಸಿ, ಆಪಾದಿತರಾದ 1) ರೋಹಿತ್, 2) ಚರಣ್ ರಾಜ್, 3) ದಿನೇಶ್ ರಾವ್, 4) ಅರ್ಜುನ್, 5) ಮಂಜುನಾಥ್, 6) ಪ್ರಶಾಂತ, 7) ದಯಾನಂದ ಪೂಜಾರಿ, 8) ಸಂತೋಷ ಇವರುಗಳನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಕೋಳಿ ಅಂಕ ಜುಗಾರಿಗೆ ಬಳಸಿದ ಕೋಳಿ ಹುಂಜ-30 (ಅಂದಾಜು ಮೌಲ್ಯ ತಲಾ 1,000/- ರೂ ನಂತೆ ಒಟ್ಟು 30,000/-). ಕೋಳಿ ಕಾಲಿಗೆ ಕಟ್ಟಲು ಬಳಸಿದ ಕೋಳಿ ಕತ್ತಿ (ಬಾಳು)-10, ಕೋಳಿಗಳನ್ನು ತುಂಬಲು ಬಳಸಿದ ಬಿಣಿ ಚೀಲ-26 ಹಾಗೂ ಕೋಳಿಗಳ ಮೇಲೆ ಜೂಜಾಟಕ್ಕಾಗಿ ಹಣವನ್ನು ಪಣವಾಗಿ ಕಟ್ಟಿದ ನಗದು ಹಣ 10630/-ರೂ ಕಂಡುಬರುತ್ತದೆ,

ವಶಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಒಟ್ಟು ಕ್ರೋಡಿಕೃತ ಅಂದಾಜು ಮೌಲ್ಯ 43,45,630/- ರೂಪಾಯಿಗಳು ಆಗಬಹುದೆಂದು ಪಂಚರುಗಳು ಅಭಿಪ್ರಾಯಪಟ್ಟಿರುತ್ತಾರೆ.

ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2025 ಕಲಂ 11(1)(a) ಪ್ರಾಣಿ ಹಿಂಸೆ ತಡೆ ಕಾಯಿದೆ ಮತ್ತು ಕಲಂ 87 93 ಕರ್ನಾಟಕ ಪೊಲೀಸ್ ಕಾಯ್ದೆ ರಂತೆ ಪ್ರಕರಣ ದಾಖಲಿಸಲಾಗಿದೆ.