Home Crime ಉಡುಪಿ : ತೋಡಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ : ತೋಡಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ : ನಗರದ ಸಮೀಪ ಉದ್ಯಾವರ ಎಂಬಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ಉದ್ಯಾವರ ಕೇದಾರ್ ನಿವಾಸಿ ರೊನಾಲ್ಡ್ ಫೆರ್ನಾಂಡಿಸ್ (52) ಎಂದು ತಿಳಿಯಲಾಗಿದೆ.

ಇವರು ಕೆಲಸ ಮುಗಿಸಿ ಮನೆ ಬಳಿ ಬರುತ್ತಿದ್ದಾಗ, ಮನೆ ಹಿಂಬದಿಯ ತೋಡಿ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ಮೃತರು ಅವಿವಾಹಿತರು. ತಾಯಿ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.