ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಮೀನುಗಾರಿಕೆಯ ದೋಣಿ ಮಗುಚಿ ಯುವಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ಯುವಕ ಬ್ರಹ್ಮಾವರ ನಿವಾಸಿ ಶರತ್ ಎಂದು ತಿಳಿದು ಬಂದಿದೆ.
ಪ್ರಕರಣದ ಸಾರಾಂಶ : ಫಿರ್ಯಾದುದಾರ ಸಂದೇಶ (32) ಕನ್ಯಾನ ಪೋಸ್ಟ್ ಬ್ರಹ್ಮಾವರ ಇವರ ದೊಡ್ಡಪ್ಪನ ಮಗ ಶರತ್ (28) ಈತನು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 22-08-2025 ರಂದು ಬೆಳಿಗ್ಗೆ 06:00 ಗಂಟೆಗೆ ಮೀನುಗಾರಿಕೆಗೆ ಅಕ್ಷಯ ಹಾಗೂ ಮಂಜುನಾಥ ಎಂಬವರೊಂದಿಗೆ ದೋಣಿಯಲ್ಲಿ ಕೋಡಿ ಗ್ರಾಮದ ಕೋಡಿ ತಲೆ ಸೀತಾನದಿ ಹೊಳೆಯಲ್ಲಿ ಹೋಗುತ್ತಿರುವಾಗ ತೆರೆಯ ರಭಸಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ಶರತ್ ರವರು ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡು ಮೃತಪಟ್ಟಿರುವುದಾಗಿದೆ. ಹಾಗೂ ದೋಣಿಯಲ್ಲಿದ್ದ ಮಂಜುನಾಥ ಯವರಿಗೆ ತಲೆಗೆ ಮೈಕೈಗೆ ಪೆಟ್ಟಾಗಿದ್ದು , ಅಕ್ಷಯ ರವರಿಗೆ ಬೇರೆ ದೋಣಿಯವರು ರಕ್ಷಿಸಿ ಕರೆ ತಂದಿರುತ್ತಾರೆ . ಮಂಜುನಾಥ ರವರನ್ನು ಸ್ಥಳೀಯರು ರಕ್ಷಣೆ ಮಾಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ.
ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ಕ್ರಮಾಂಕ 45/2025 ಕಲಂ:194 ಬಿ.ಎನ್.ಎಸ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.