ದಿನಾಂಕ 24-04-2026 ರಂದು ಕಾರ್ಕಳದ ಬಿಲ್ಲವ ಸಮಾಜ ಪೆರ್ವಾಜೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಯುವವಾಹಿನಿ (ರಿ.) ಕಾರ್ಕಳ ಘಟಕ, ಎನ್. ಪಿ ಗ್ರೂಪ್ಸ್, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಇವರ ಸಹಯೋಗದಲ್ಲಿ ಕಾರ್ಕಳದಲ್ಲಿ ನಡೆದ ತಾಲೂಕು ಮಟ್ಟದ ಬೃಹತ್ ಹಲಸಿನ ಮೇಳವನ್ನು ಮಾನ್ಯ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಉದ್ಘಾಟನೆ ಮಾಡಿದರು.
ದೀಪ ಬೆಳಗಿಸಿ ಹಲಸಿನಹಣ್ಣನ್ನು ಕತ್ತರಿಸುವ ಮೂಲಕ ಸಂಪ್ರದಾಯಕವಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

ಸ್ವ ಉದ್ಯೋಗಕ್ಕೆ ಉತ್ತೆಜನ ಕೊಡುದರ ಜೊತೆ ಸ್ವ ಉತ್ಪನ್ನದ ಹೆಸರಿನ ಜೊತೆ ನಮ್ಮೂರ ಹೆಸರನ್ನು ಇಟ್ಟಾಗ ನಮ್ಮ ಉತ್ಪನ್ನ ಇನ್ನಷ್ಟು ಖ್ಯಾತಿ ಪಡೆಯುತ್ತೆ ಎಂದು ಉದ್ಘಾಟಕರ ಭಾಷಣ ನುಡಿದರು.
ಸ್ವ ಉದ್ಯೋಗಕ್ಕೆ ಒತ್ತು ಕೊಟ್ಟಾಗ ಗ್ರಾಮೀಣ ಆಹಾರ ಬೆಳಕಿಗೆ ಬರಲಿದೆ ಉದ್ಯಮಿ ನಿತ್ಯಾನಂದ ಪೈ ಹಾರೈಸಿದರು.
ಆಧುನಿಕ ಆಹಾರ ಸಂಪ್ರದಾಯಕ ಆಹಾರವನ್ನು ಸಂಪೂರ್ಣವಾಗಿ ನಾಶ ಮಾಡಿದೆ ಹಾಗಾಗಿ ಇಂತಹ ಹಲಸು ಮೇಳದ ಅಗತ್ಯ ನಮ್ಮ ಮುಂದಿದೆ ಎಂದು ಕ್ರಿಯೇಟಿವ್ ಸಹ ಸಂಸ್ಥಾಪರಾದ ಅಶ್ವಥ್ ಅವರು ಹಿತ ನುಡಿ ನುಡಿದರು,.
ಕಾರ್ಯಕ್ರಮದ ಆಯೋಜಕರಾದ ರೋಟರಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಶೆಟ್ಟಿ ಹಲಸು ಮೇಳದ ಉದ್ದೇಶ ತಿಳಿಸಿದರೆ, ಸ್ಪರ್ಧೆಗಳ ಮಾಹಿತಿ ಮತ್ತು ಅದರ ಅಗತ್ಯತೆಯನ್ನು ಎನ್ ಪಿ ಗ್ರೂಪ್ ನ ಮಾಲೀಕರದ ವಾಸುದೇವ್ ಭಟ್ ತಿಳಿಸಿದರು, ಸಂಘ ಸಂಸ್ಥೆಯ ಭಾಗವಹಿಸುವಿಕೆ ಬಗ್ಗೆ ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ತಿಳಿಸಿದರು, ಸ್ಟಾಲ್ ಗಳ ಮಾಹಿತಿ ಬೆನಕ ಇವೆಂಟ್ಸ್ ನ ಮಾಲಕರದ ಗಣೇಶ್ ಶೆಟ್ಟಿ ತಿಳಿಸಿದರು. ಕಾರ್ಯಕ್ರಮದ ಪ್ರಸ್ತಾವನೆ ಮತ್ತು ಸ್ವಾಗತವನ್ನು ಸಾಮಾಜಿಕ ಕಾರ್ಯಕರ್ತೆ ವಂಶಿ ಇವೆಂಟ್ಸ್ ನ ರಮಿತಾ ಸೂರ್ಯವಂಶಿ ಅವರು ಮಾಡಿದರು. ಕಾರ್ಯಕ್ರಮದ ಧನ್ಯವಾದ ಯುವವಾಹಿನಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಮಮತ ಪೂಜಾರಿ, ಪ್ರಾರ್ಥನೆ ಕು. ಪ್ರಾರ್ಥನಾ ಹಾಗೂ ನಿರೂಪಣೆ ಕು. ಹರ್ಷಿತಾ ಅವರು ಮಾಡಿದರು.
ಕಾರ್ಯಕ್ರಮದ ಆಕರ್ಷಣೆ :
ಹಲಸಿನ ಜಿಲೇಬಿ, ಕೇರಳದ ಅಲೆಪಿ ಇಂದ ಬಂದಿರುವ 60ಕ್ಕೂ ಹೆಚ್ಚು ಹಲಸಿನ ತಿಂಡಿ ಕಾರ್ಕಳದ ಹಲಸಿನ ಮೇಳದಲ್ಲಿ ವಿಶೇಷ ಆಕರ್ಷಣೆ, ಹಲಸಿನ ಹಣ್ಣಿನ ಜಿಲೇಬಿ, ಐಸ್ ಕ್ರೀಮ್, ಮುಲ್ಕ, ಗೋಬಿಮಂಚೂರಿ, ಹಲ್ವಾ, ಕಡಬು, ಪೋಡಿ, ಪಾಯಸ, ಹಲಸಿನ ಹಣ್ಣಿನ ಬೀಜದ ಪತರೋಡೆ, ಇನ್ನಿತರ ವಿವಿಧ ರಾಜ್ಯದ ಮೂಲೆ ಮೂಲೆಗಳಿಂದ ಇಲಕಲ್ ಸಾರಿ, ಮೈಸೂರು ಸಿಲ್ಕ್, ಹೇಗೋಡ್ ಖಾದಿ, ಆಧಿವಾಸಿ ಹೇರ್ ಆಯಿಲ್, ಚೆನ್ನಾಪಟ್ಟಣ ಗೊಂಬೆ, ವಿವಿಧ ತರದ ಉಪ್ಪಿನಕಾಯಿ, ಆಯುರ್ವೇದ ಉತ್ಪನ್ನಗಳು, ಅಲಂಕರಿಕಾ ಉತ್ಪನ್ನಗಳು, ಕೇರಳ ಬೆಲ್ಲ ಮುಂತಾದವು ಕಾಣಸಿಗುವುದು.





