Home Crime ಗೂಡ್ಸ್ ವಾಹನದಲ್ಲಿ ಕೋಣ ಹಾಗೂ ಎಮ್ಮೆಗಳು ಸಾಗಾಟ : ನಾಲ್ಕು ಮಂದಿ ವಶಕ್ಕೆ…!!

ಗೂಡ್ಸ್ ವಾಹನದಲ್ಲಿ ಕೋಣ ಹಾಗೂ ಎಮ್ಮೆಗಳು ಸಾಗಾಟ : ನಾಲ್ಕು ಮಂದಿ ವಶಕ್ಕೆ…!!

ಶಂಕರನಾರಾಯಣ : ಕುಂದಾಪುರ ಸಮೀಪ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೂಲೆರೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕೋಣ ಹಾಗೂ ಎಮ್ಮೆಗಳನ್ನು ಸಾಗಾಟ ಮಾಡುತ್ತಿರುವಾಗ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಶಾಂತೇಶ ಚಂದ್ರಪ್ಪ ಜಾವಳ್ಳಿ, ಹಿನಾಯತ್‌ ನಾಸಿಪುಡಿ, ಸುನೀಲ್‌ ಲಕ್ಮ್ಮಪ್ಪ ಜಾವಳ್ಳಿ,ಅರುಣ ಚಂದ್ರಪ್ಪ ಜಾವಳ್ಳಿ ಎಂದು ಗುರುತಿಸಲಾಗಿದೆ.

ಪ್ರಕರಣದ ಸಾರಾಂಶ : ದಿನಾಂಕ 22.08.2025 ರಂದು ಬೆಳಿಗ್ಗೆ 06.00 ಘಂಟೆಗೆ ಆರೋಪಿಗಳು 1. ಶಾಂತೇಶ ಚಂದ್ರಪ್ಪ ಜಾವಳ್ಳಿ,2. ಹಿನಾಯತ್‌ ನಾಸಿಪುಡಿ 3. ಸುನೀಲ್‌ ಲಕ್ಮ್ಮಪ್ಪ ಜಾವಳ್ಳಿ,4. ಅರುಣ ಚಂದ್ರಪ್ಪ ಜಾವಳ್ಳಿ ರವರು KA68-6605 ನೇ ನಂಬ್ರದ ಮಹಿಂದ್ರಾ ಕಂಪೆನಿಯ ಬಿಳಿ ಬಣ್ಣದ ಬೂಲೆರೋ ಮ್ಯಾಕ್ಸ್‌ ಗೂಡ್ಸ್‌ ವಾಹನದಲ್ಲಿ ಯಾವುದೇ ಪರವಾನಿಗೆ ಹೊಂದದೇ ಅಂದಾಜು 3 ವಷ೯ದ ಕಪ್ಪು ಬಣ್ಣದ ಕೋಣಗಳು-5 ಹಾಗೂ ಅಂದಾಜು 4 ವಷ೯ದ ಕಪ್ಪು ಬಣ್ಣದ ಎಮ್ಮೆಗಳು-3 ಹಾವೇರಿ ಕಡೆಯಿಂದ ಬಿಡಾಡಿ ಕೋಣ ಮತ್ತು ಎಮ್ಮೆಗಳನ್ನು ಕಳ್ಳತನ ಮಾಡಿ ವಾಹನದಲ್ಲಿ ತುಂಬಿಕೊಂಡು, ಸದ್ರಿ ಕೋಣ ಮತ್ತು ಎಮ್ಮೆಗಳನ್ನು ಹಾವೇರಿಯ ಅರುಣ ಚಂದ್ರಪ್ಪ ಜಾವಳ್ಳಿ ರವರು ಹೇಳಿದಂತೆ ಮಂಗಳೂರಿನ ಕಡೆ ತೆಗೆದುಕೊಂಡು ಹೋಗಿ ವಧೆ ಮಾಡಿ ಮಾಂಸ ಮಾಡುವ ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡುವ ಉದ್ದೇಶದಿಂದ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಜಂಕ್ಷನ್‌ ಸಮೀಪ ಶಂಕರನಾರಾಯಣ-ಹಾಲಾಡಿ ರಸ್ತೆಯಲ್ಲಿ ಸಾಗಾಟ ಮಾಡುತ್ತಿದ್ದರು ಈ ಸಮಯ ಫಿಯಾ೯ದುದಾರ ಗಡ್ಡೇಕರ್.ಪೊಲೀಸ್‌ ಉಪನಿರೀಕ್ಷಕರು ಶಂಕರನಾರಾಯಣ ಪೊಲೀಸ್ ಠಾಣೆ. ಇವರು ಖಚಿತ ಮಾಹಿತಿಯಂತೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ KA68-6605 ಗೂಡ್ಸ್ ಬೂಲೆರೋ ವಾಹನದಲ್ಲಿದ್ದ 5 ಗಂಡು ಕೋಣಗಳ ಅಂದಾಜು ಒಟ್ಟು ಮೌಲ್ಯ 50,000/- ರೂಪಾಯಿ ಹಾಗೂ 3 ಎಮ್ಮೆಯ ಅಂದಾಜು ಮೌಲ್ಯ ಒಟ್ಟು 30,000/- ರೂಪಾಯಿ ಆಗಬಹುದು ಹಾಗೂ ಮಹಿಂದ್ರಾ ಕಂಪೆನಿಯ ಬೂಲೆರೋ ಮ್ಯಾಕ್ಸ್‌ ವಾಹನ KA68-6605 ನೇ ದರ ಅಂದಾಜು ಮೌಲ್ಯ 8,00,000/- ರೂ ಆಗಬಹುದು. ಆರೋಪಿತರ ಬಳಿ ಓಪ್ಪೊ ಮೊಬೈಲ್‌-1 ಅಂದಾಜು ಮೌಲ್ಯ 10000/- ರೂ, ರೆಡ್ಮಿ ಮೊಬೈಲ್-1 ಅಂದಾಜು ಮೌಲ್ಯ 10000/- ರೂ, ಮತ್ತು ಓಪ್ಪೊ ಮೊಬೈಲ್‌-1 ಅಂದಾಜು ಮೌಲ್ಯ 10000/- ರೂಪಾಯಿ ವನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿ ಗಳನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 77/2025 ಕಲಂ 4,5,7,12 ಕರ್ನಾಟಕ ಗೋ ಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆ 1966. ಮತ್ತು ಸೆಕ್ಷನ್‌ 66 ಜೊತೆಗೆ 192(ಎ) ಐ.ಎಮ್‌.ವಿ. ಆಕ್ಟ್‌ ಹಾಗೂ ಕಲಂ 303(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.