ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ವ್ಯಕ್ತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬಳಿ ಇದ್ದ ಬ್ಯಾಗ್ ಹಾಗೂ ಮೈಮೇಲಿನ ಚಿನ್ನ ಕಳವು ಆಧ ಘಟನೆ ನಡೆದಿದೆ.
ಹರೀಶ್ ಬಂಟ್ವಾಳ ಎಂಬವರು ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದುದಾರರಾದ ಹರೀಶ್ ಬಂಟ್ವಾಳ ರವರು ದಿ.11/04/2025 ರಂದು 15-00 ಗಂಟೆಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ತಾನು ದಿನಾಂಕ 09-04-2025 ರಂದು ಕಾರವಾರದಿಂದ 16:00 ಗಂಟೆಗೆ ಹೊರಟು ಮಂಗಳೂರಿಗೆ ಬರುತ್ತಿರುವಾಗ ರೈಲು ಬೋಗಿಯಲ್ಲಿ ಸುಮಾರು 35 ವರ್ಷದ ವ್ಯಕ್ತಿ ಪ್ರಯಾಣಿಸುತ್ತಿದ್ದವನು ಭಟ್ಕಳ ನಂತರ ಚಲಿಸುವಾಗ ಸಂಜೆ 18-15 ಗಂಟೆಗೆ ಪಿರ್ಯಾಧಿದಾರರಿಗೆ ಚಾಕಲೆಟ ನೀಡಿದ್ದು ಅದನು ತಿಂದ ಫಿರ್ಯಾಧಿದಾರರಿಗೆ ಅಮಲಾಗಿ ನಿದ್ರೆ ಬಂದಿದ್ದು ದಿನಾಂಕ 10-04-2025 ರಂದು ಬೆಳಿಗ್ಗೆ 08:00 ಗಂಟೆಗೆ ಎಚ್ಚರಗೊಂಡು ನೋಡುವಾಗ ಮೈಮೇಲೆ ಧರಿಸಿದ್ದ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ ರೂ 2,35,000/- ಬೆಲೆಯ ಸರ, 08 ಗ್ರಾಂ ತೂಕದ ರೂ 70,000/- ಬೆಲೆಯ ಉಂಗುರ, Fast track watch ಬೆಲೆ ಸುಮಾರು 3500/-,ಮೊಬೈಲ್ ಒನ್ ಪ್ಲಸ್ ಸಿಮ್ ನಂ 9686675271 ಬೆಲೆ ಸುಮಾರು 28,000/-, ಶರ್ಟ ಜೇಬಿನಲ್ಲಿದ್ದ ರೂ 5000/- ನಗದು ಮತ್ತು ಬ್ಯಾಗಿನಲ್ಲಿದ್ದ ರೂ 1,45,000/- ನಗದು ಒಟ್ಟು ಮೊತ್ತ 4,86,500/- ರೂ ಕಳವು ಆಗಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 150/2025 ಕಲಂ 123 305(c) BNS ರಂತೆ ಪ್ರಕರಣ ದಾಖಲಿಸಿರುವುದಾಗಿದೆ.