Home Crime ಕಂದಕಕ್ಕೆ ಬಿದ್ದ ಕಾರು : ಆರು ವರ್ಷದ ಮಗು‌ ಸೇರಿದಂತೆ ಐವರು ಸಾವು…!!

ಕಂದಕಕ್ಕೆ ಬಿದ್ದ ಕಾರು : ಆರು ವರ್ಷದ ಮಗು‌ ಸೇರಿದಂತೆ ಐವರು ಸಾವು…!!

ಉತ್ತರ ಪ್ರದೇಶ :  ಹಾರ್ದೋಯ್ ಜಿಲ್ಲೆಯಲ್ಲಿ ಕಾರು ಕಂದಕಕ್ಕೆ ಬಿದ್ದು ಆರು ವರ್ಷದ ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.

ಶಹಾಬಾದ್ ವೃತ್ತ ಅಧಿಕಾರಿ ಅನುಜ್ ಮಿಶ್ರಾ ಅವರ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ, ಆಲಮ್‌ನಗರ ರಸ್ತೆಯಲ್ಲಿ ಕಂದಕಕ್ಕೆ ಬಿದ್ದು 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಎಲ್ಲಾ ಗಾಯಾಳುಗಳನ್ನು ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು, ಅಲ್ಲಿ ವೈದ್ಯರು ಒಂದು ಮಗು ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರನ್ನು ಜಿತೇಂದ್ರ (22), ಆಕಾಶ್ (18), ಸಿದ್ಧಾರ್ಥ್ (6), ರಾಮು (35) ಮತ್ತು ಜೌಹರಿ (40) ಎಂದು ಮಾಹಿತಿ ತಿಳಿದು ಬಂದಿದೆ.

ಮೃತರು ಹಾರ್ದೋಯ್‌ನ ಪಾಲಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಗಳು. ಇಂದು ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ ಅಪಘಾತ ನಡೆದಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.