ಮುಂಬೈ: ನಟ ರಿತೇಶ್ ದೇಶಮುಖ್ ಅವರ ಚಿತ್ರ ‘ರಾಜಾ ಶಿವಾಜಿ’ ಚಿತ್ರೀಕರಣದ ಸಮಯದಲ್ಲಿ ಅಪಘಾತ ಸಂಭವಿಸಿದೆ.. ಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಡಾನ್ಸರ್ ಸೌರಭ್ ಶರ್ಮಾ ನಿಧನರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ಸೌರಭ್ ಕಣ್ಮರೆಯಾಗಿದ್ದರು.. ಆದರೆ ಎರಡು ದಿನಗಳ ನಂತರ ಸೌರಭ್ ಅವರ ಶವ ನದಿಯಲ್ಲಿ ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬರುತ್ತಿದೆ. ಸೌರಭ್ ಸಾವಿನ ನಂತರ, ಕುಟುಂಬದ ಮೇಲೆ ದುಃಖದ ಬೆಟ್ಟವೇ ಬಿದ್ದಿದೆ. ಇಲ್ಲಿಯವರೆಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಚಿತ್ರೀಕರಣ ಸತಾರಾ ಜಿಲ್ಲೆಯ ಸಂಗಮ್ ಮಹುಲಿ ಗ್ರಾಮದಲ್ಲಿ ನಡೆಯುತ್ತಿತ್ತು. ಈ ವೇಳೆ ಸೌರಭ್ ಶರ್ಮಾ ಡಾನ್ಸರ್ ಆಗಿ ಹಾಡಿನ ಭಾಗವಾಗಿದ್ದರು. ಹಾಡಿನ ಚಿತ್ರೀಕರಣ ಮುಗಿದ ನಂತರ, ಅವರು ಕೃಷ್ಣಾ ನದಿಯಲ್ಲಿ ಕೈ ತೊಳೆಯಲು ಹೋಗಿದ್ದು, ನದಿಯ ಬಲವಾದ ಪ್ರವಾಹದ ಅರಿವಿಲ್ಲದೆ, ಈಜಲು ನದಿಗೆ ಹಾರಿದ ಅವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ..
ಈ ಬಗ್ಗೆ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ನೀಡಲಾಗಿದೆ.. ಎರಡು ದಿನಗಳ ಹುಡುಕಾಟದ ನಂತರ ಅವರ ಶವ ನದಿಯಲ್ಲಿ ಅವರ ಪತ್ತೆಯಾಗಿದೆ. ಈ ಘಟನೆಯಿಂದಾಗಿ, ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಚಿತ್ರದ ಬಗ್ಗೆ ಹೇಳುವುದಾದರೆ, ‘ರಾಜ ಶಿವಾಜಿ’ ಚಿತ್ರವು ಮಹಾನ್ ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ರಿತೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ರಿತೇಶ್ ದೇಶಮುಖ್ ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವುದಾದರೇ ನಟ ಶೀಘ್ರದಲ್ಲೇ ‘ರೈಡ್ 2’ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರ ಮೇ 1 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಜಯ್ ದೇವಗನ್, ತಮನ್ನಾ ಭಾಟಿಯಾ, ಸೌರಭ್ ಶುಕ್ಲಾ, ವಾಣಿ ಕಪೂರ್, ಸುಪ್ರಿಯಾ ಪಾಠಕ್, ಅಮಿತ್ ಸಿಯಾಲ್ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಿತೇಶ್ ದೇಶಮುಖ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ನಟ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಇಷ್ಟೇ ಅಲ್ಲ, ರಿತೇಶ್ ಮತ್ತು ಅವರ ಪತ್ನಿ ಜೆನಿಲಿಯಾ ಅವರ ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
