Home Crime ಕಾರ್ಕಳ: ದೀರ್ಘಕಾಲದ ನೋವಿಗೆ ಜುಗುಪ್ಸೆ : ವ್ಯಕ್ತಿ ಆತ್ಮಹತ್ಯೆ…!!

ಕಾರ್ಕಳ: ದೀರ್ಘಕಾಲದ ನೋವಿಗೆ ಜುಗುಪ್ಸೆ : ವ್ಯಕ್ತಿ ಆತ್ಮಹತ್ಯೆ…!!

ಕಾರ್ಕಳ: ಮುಂಡ್ಕೂರು ಗ್ರಾಮದ ಸ್ಟ್ಯಾನಿ ಮಾರ್ಟಿಸ್ (75) ಅವರ ತಮ್ಮ ಫ್ರಾನ್ಸಿಸ್ ಮಾರ್ಟಿಸ್ (60) ಅವರು ದೀರ್ಘಕಾಲದ ನೋವಿನಿಂದ ಬಳಲುತ್ತ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಮೃತರು ತಮ್ಮ ಅಣ್ಣನ ಮನೆಯ ಪಕ್ಕದಲ್ಲೇ ಒಬ್ಬಂಟಿಯಾಗಿ ವಾಸವಾಗಿದ್ದು, ಸುಮಾರು 10 ತಿಂಗಳ ಹಿಂದೆ ಮನೆಯ ಬಳಿ ಬಿದ್ದು ಸೊಂಟಕ್ಕೆ ತೀವ್ರ ಗಾಯಗೊಂಡಿದ್ದರು. ಬಳಿಕ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೂ ಗಾಯದ ನೋವು ಮುಂದುವರಿದ ಹಿನ್ನೆಲೆಯಲ್ಲಿ ಅವರು ಮಾನಸಿಕವಾಗಿ ಬೇಸತ್ತು ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ಹಿನ್ನೆಲೆ, ಏಪ್ರಿಲ್ 21ರ ಸಂಜೆ 6:30 ಗಂಟೆಯಿಂದ ಏಪ್ರಿಲ್ 22ರ ಮಧ್ಯಾಹ್ನ 12:30 ಗಂಟೆಯ ನಡುವಿನ ಅವಧಿಯಲ್ಲಿ, ತಮ್ಮ ಮನೆಯೊಳಗೆ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.