ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ಕೆರೆಗೆ ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ
ಮೃತಪಟ್ಟ ವ್ಯಕ್ತಿ ನಾಗರಾಜ ಎಂದು ತಿಳಿಯಲಾಗಿದೆ.
ಪ್ರಕರಣ ಸಾರಾಂಶ : ಪಿರ್ಯಾದಿ ಉಮೇಶ (40) ಕಟ್‌ಬೆಲ್ತೂರು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣನಾದ ನಾಗರಾಜ ಪ್ರಾಯ 48 ವರ್ಷ ಎಂಬವರು ಗಾರೆ ಕೆಲಸ ಮಾಡಿಕೊಂಡಿದ್ದು, ಮಳೆಗಾಲದಲ್ಲಿ ಕೆಲಸವಿಲ್ಲದೇ ಇರುವುದರಿಂದ ಮೀನು ಹಿಡಿಯಲು ಹೋಗುತ್ತಿದ್ದರು. ನಾಗರಾಜರವರು ಎಂದಿನಂತೆ ದಿನಾಂಕ:12.08.2025 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಮೀನು ಹಿಡಿಯಲು ಬಲೆ ಹಿಡಿದುಕೊಂಡು ಹೋಗಿದ್ದು , ಮದ್ಯಾಹ್ನ ಊಟಕ್ಕೂ ಬಂದಿರುವುದಿಲ್ಲ. ಸಂಜೆಯಾದರೂ ವಾಪಾಸು ಮನೆಗೆ ಬಾರದೇ ಇರುವುದರಿಂದ ನಾಗರಾಜರವರು ಯಾವಾಗಲೂ ಮೀನು ಹಿಡಿಯಲು ಹೋಗುತ್ತಿದ್ದ ಸ್ಥಳಕ್ಕೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಹೊಳೆಯಲ್ಲಿ ತುಂಬಾ ನೀರು ಇದ್ದ ಕಾರಣ ಎಲ್ಲಿಯೂ ಏನೂ ಕಂಡು ಬಂದಿರುವುದಿಲ್ಲ. ದಿನಾಂಕ:13.08.2025 ರಂದು ಪಿರ್ಯಾದಿದಾರರು ತನ್ನ ಅಳಿಯ ಮತ್ತು ಸ್ನೇಹಿತರೊಂದಿಗೆ ನಾಗರಾಜರವರನ್ನು ಹುಡುಕಾಡಲಾಗಿ 09:00 ಗಂಟೆ ಸುಮಾರಿಗೆ ನಾಗರಾಜರವರ ಮೃತ ದೇಹವು ಕಟ್‌ಬೆಲ್ತೂರು ಗ್ರಾಮದ ಸಿಗಡಿ ಕೆರೆಯಲ್ಲಿ ತೇಲುತ್ತಿದ್ದು ಹಾಗೂ ಬಲೆ ಹಾಕಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ