Home Art & Culture ಮುಂಜಾನೆ ಎದ್ದು ಬಿಯರ್ ರೀತಿ ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್ : ಕಾರಣ...

ಮುಂಜಾನೆ ಎದ್ದು ಬಿಯರ್ ರೀತಿ ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್ : ಕಾರಣ ಏನು.?…!!


ಮುಂಬಯಿ: ಹಿರಿಯ ನಟ ಪರೇಶ್ ರಾವಲ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಾಗ ಭರಪೂರವಾಗಿ ನಗು ಉಕ್ಕಿಸುತ್ತಾರೆ. ಅದರಲ್ಲೂ ‘ಹೇರಾ ಫೇರಿ’ ಸಿನಿಮಾ ಸರಣಿಯಲ್ಲಿ ಅವರು ಮಾಡಿದ ಬಾಬುರಾವ್ ಪಾತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಈಗ ಅವರ ಕಡೆಯಿಂದ ಒಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಮುಂಜಾನೆ ಎದ್ದ ತಕ್ಷಣ ಪರೇಶ್ ರಾವಲ್ ಕುಡಿಯೋದು ನೀರನಲ್ಲ, ಬದಲಿಗೆ ತಮ್ಮದೇ ಮೂತ್ರವನ್ನು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಇತ್ತೀಚೆಗೆ ಪರೇಶ್ ರಾವಲ್ ಶೂಟಿಂಗ್ನಲ್ಲಿ ಭಾಗಿ ಆಗಿದ್ದಾಗ ಮೊಣಕಾಲು ಗಾಯ ಆಯಿತು. ಇದರ ಪರಿಹಾರಕ್ಕೆ ಅಜಯ್ ದೇವಗನ್ ತಂದೆ ವೀರು ದೇವಗನ್ ಒಂದು ಪರಿಹಾರ ಕೊಟ್ಟರು. ಅದುವೇ ಮೂತ್ರ ಸೇವನೆ. ಮುಂಜಾನೆ ಎದ್ದ ತಕ್ಷಣ ಅವರು ಮೂತ್ರ ಸೇವನೆ ಮಾಡಲು ಆರಂಭಿಸಿದರು ಮತ್ತು ಕಾಲಿನ ಸಮಸ್ಯೆಗೆ ಪರಿಹಾರ ಪಡೆದುಕೊಂಡರು.

‘ನಾನು ಆಸ್ಪತ್ರೆಯಲ್ಲಿ ಇದ್ದಾಗ ವೀರು ದೇವಗನ್ ಅವರು ಭೇಟಿ ಮಾಡಲು ಬಂದರು. ಅವರು ಬಂದು ಏನಾಯಿತು ಎಂದು ವಿಚಾರಿಸಿದರು. ನನ್ನ ಕಾಲಿನ ಗಾಯದ ಬಗ್ಗೆ ಅವರಿಗೆ ವಿವರಿಸಿದೆ. ಆ ಸಮಯದಲ್ಲಿ ನನ್ನ ಕರಿಯರ್ ಕೊನೆ ಆಯಿತು ಎಂದುಕೊಂಡೆ. ಆಗ ಅವರು ಮುಂಜಾನೆ ಎದ್ದ ತಕ್ಷಣ ನನ್ನದೇ ಮೂತ್ರವನ್ನು ಸೇವನೆ ಮಾಡಲು ಹೇಳಿದರು. ಮದ್ಯ ಸೇವನೆ ಮಾಡಬಾರದು ಎಂದರು. ನಾನು ಅದನ್ನು ಬಿಟ್ಟೆ. ಸಾಮಾನ್ಯ ಆಹಾರ ಸೇವನೆ ಮಾಡಿದೆ’ ಎಂದು ಪರೇಶ್ ಹೇಳಿದ್ದಾರೆ.

ನಾನು ನನ್ನದೇ ಮೂತ್ರವನ್ನು ಬಿಯರ್ ರೀತಿ ಸಿಪ್ ಮಾಡುತ್ತಿದ್ದೆ. ನಾನು ಅದನ್ನು ಸರಿಯಾಗಿ ಪಾಲಿಸುತ್ತಿದ್ದೆ. ನಾನು ಇದನ್ನು 15 ದಿನಗಳ ಕಾಲ ಮಾಡಿದೆ. ನನ್ನ ಎಕ್ಸ್ರೇ ರಿಪೋರ್ಟ್ ಬಂತು. ವೈದ್ಯರೇ ಅಚ್ಚರಿ ಆದರು. ಕಾಲಿನ ಸಮಸ್ಯೆ ಪರಿಹಾರ ಆಗಿದೆ ಎಂದರು. ಸಾಮಾನ್ಯವಾಗಿ ಈ ರೀತಿ ಕಾಲಿನ ತೊಂದರೆ ಆದಾಗ ಸರಿಯಾಗಲು ಎರಡೂವರೆ ತಿಂಗಳು ಬೇಕಾಗುತ್ತದೆ. ಆದರೆ, ನನಗೆ ಕೇವಲ 15 ದಿನದಲ್ಲಿ ಪರಿಹಾರ ಆಯಿತು ಎಂದು ಅವರು ವಿವರಿಸಿದ್ದಾರೆ.  ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ.