ಮುಂಬಯಿ : ಮಹಾರಾಷ್ಟ್ರದ ಮುಂಬಯಿ ನಗರದ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ಹೆಸರುವಾಸಿಯಾಗಿರುವ ಪೊಲೀಸ್ ಅಧಿಕಾರಿ ಸಚಿನ್ ಕದಮ್ ಎಸಿಪಿ ಯಾಗಿ ಬಡ್ತಿಯಾಗಿದ್ದಾರೆ. ಮಾಟುಂಗ ನಗರದ ಪೊಲೀಸ್ ಠಾಣೆಯಲ್ಲಿ ಎಸಿಪಿ ಯಾಗಿ ಭಡ್ತಿಯಾಗಿದ್ದಾರೆ.
ಈ ಹಿಂದೆ ಬೋಯಿವಾಡ ಪೊಲೀಸ್ ಸ್ಟೇಶನ್ ನಲ್ಲಿ ಸಿನಿಯಾರ್ ಪಿ ಐ ಆಗಿ ಕೆಲಸ ಮಾಡಿದ್ದರು.ಖಡಕ್ ಪೊಲೀಸ್ ಅಧಿಕಾರಿಯಾಗಿದ್ದರು. ಈ ಹಿಂದೆ ವಿಜಯ್ ಸಾಲಸ್ಕರ್ ಟೀಮ್ ಕೆಲಸ ಮಾಡಿ ಕೆಲವು ಭೂಗತ ಲೋಕದ ರೌಡಿಗಳು ಎನ್ ಕೌಂಟರ್ ಮಾಡಿದ್ದರು. ಸಚಿನ್ ಕದಮ್ ಕ್ರೈಮ್ ಬ್ರಾಂಚ್ ನಲ್ಲಿ ಕೆಲಸ ಮಾಡುತ್ತಿರುವಾಗ ವಾಂಟೆಡ್ ಕ್ರಿಮಿನಲ್ ಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸಚಿನ್ ಕದಮ್ ಅವರಿಗೆ ರಾಷ್ಟ್ರಪತಿ ಪದಕ, ಗೃಹ ಸಚಿವರ ಪದಕ ಹಾಗೂ ಕೆಲವು ಪದಕಗಳು ದೊರಕಿವೆ.
ಸಚಿನ್ ಕದಮ್ ಎಸಿಪಿಯಾಗಿ ಬಡ್ತಿ ಹೊಂದಿದ್ದಕ್ಕೆ ಹೋಟೆಲ್ ಉದ್ಯಮಿಗಳಾದ ನವೀನ್ ಶೆಟ್ಟಿ, ರಮೇಶ್ ಶೆಟ್ಟಿ, ವಿಜೇತ್ ಶೆಟ್ಟಿ ಹಾಗೂ ಪತ್ರಕರ್ತ ರೂಪೇಶ್ ಕಲ್ಮಾಡಿ ಶುಭ ಹಾರೈಸಿದ್ದಾರೆ.

