ಉಡುಪಿ : ನಗರ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆಯಿಂದ ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ತಾಮ್ರದ ಪೈಪ್ ಕಳ್ಳತನದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಹಮ್ಮದ್ ಜಾವೀದ್ ಹಾಗೂ ಸಯ್ಯದ್ ದಾದಾ ಪಿರ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ : ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್ ಪೈಪ್ ಲೈನ್ ಜೋಡಣೆಗೆ ಸ್ಟೋರೂಮ್ ನಲ್ಲಿಟ್ಟಿದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಗಳು ಕಾಣದೇ ಇದ್ದು, ಆಸ್ಪತ್ರೆಯ ಸಿಸಿ ಕ್ಯಾಮಾರಗಳನ್ನು ಪರಿಶೀಲನೆ ನಡೆಸಿದಾಗ ದಿನಾಂಕ 20/07/2025 ರಂದು ಲಿಯಾಖತ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಸ್ಟೋರ್ ರೂಮಿನಲ್ಲಿಟ್ಟಿದ್ದ ಕಾಪರ್ ಪೈಪ್ , ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಗಳನ್ನು ಸುಮಾರು 8 ಲಕ್ಷ ಮೌಲ್ಯದ ಸೊತ್ತುಗಳನ್ನು ಕಾರಿನಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ವಿ ಬಡಿಗೇರ ನೇತೃತ್ವದ ತಂಡ ವಿಶೇಷ ತಂಡವು ದಿನಾಂಕ: 12.08.2025 ರಂದು ಪ್ರಕರಣದ ಆರೋಪಿಗಳಾದ 1) ಮಹಮ್ಮದ್ ಜಾವೀದ್ ಪ್ರಾಯ: 29 ವರ್ಷ ,ತಂದೆ: ಮಹಮ್ಮದ್ ಪೀರ್ ವಾಸ: ಮನೆ ನಂಬ್ರ: 34/6,1 ನೇ ಮೈನ್ ,4 ನೇ ಅಡ್ಡ ರಸ್ತೆ, ವಿದ್ಯಾನಗರ, ಹೆಚ್‌ಪಿ. ನ್ಯೂ ಟೌನ್ ಪಬ್ಲಿಕ್ ಸ್ಕೂಲ್ ಬಳಿ, ಡಾ ಶಿವರಾಮ ಕಾರಂತ ನಗರ, ಬೆಂಗಳೂರು 2) ಸಯ್ಯದ್ ದಾದಾ ಪಿರ್ @ ಲಿಯಾಕತ್ ಪ್ರಾಯ:28 ವರ್ಷ,ತಂದೆ: ಸಯ್ಯದ್ ಜಾಕೀರ್ ಹುಸೇನ್ ವಾಸ: ಪಾರ್ಕ ಮೊಹೊಲ್ಲಾ,ಶಿರಾ ನಗರ, ತಾಲೂಕು, ತುಮಕೂರು ಜಿಲ್ಲೆ ಎಂಬುವರನ್ನು ಶಿವಮೊಗ್ಗದ ನಗರದಲ್ಲಿ ವಶಕ್ಕೆ ಪಡೆದು,
ಆರೋಪಿತರು ಪ್ರಕರಣದಲ್ಲಿ ಕಳವು ಮಾಡಿದ್ದ ಒಟ್ಟು ರೂ 2,81,000 ಮೌಲ್ಯದ ತಾಮ್ರದ ಪೈಪ್ ತುಂಡುಗಳನ್ನು ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಡಿಸೈರ್ ಕಾರು ಹಾಗೂ ಎಕ್ಷೆಲ್ ಪ್ರೇಮ್ ನ್ನು ಒಟ್ಟು ರೂ 6,31,500. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್ ಉಡುಪಿ ಜಿಲ್ಲೆರವರ ನಿರ್ದೇಶನದಂತೆ, ಸುಧಾಕರ್ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿಟಿ ಪ್ರಭು. ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ವಿ.ಬಡಿಗೇರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ,ಭರತೇಶ್ ಕಂಕಣವಾಡಿ, ನಾರಯಣ ಬಿ. ಗೋಪಾಲಕೃಷ್ಣ ರವರ ಮುತುವರ್ಜಿಯಲ್ಲಿ ಠಾಣಾ ಸಿಬ್ಬಂದಿಯವರಾದ ಪ್ರಸನ್ನ.ಸಿ , ಸಂತೋಷ್ ಶೆಟ್ಟಿ ಆನಂದ, ಸಂತೋಷ್ ರಾಥೋಡ್, ಶಿವು ಕುಮಾರ್, ಹೇಮಂತ ಕುಮಾರ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಮತ್ತು ನಿತಿನ್ ಕುಮಾರ್‌ರವ ರವರ ತಂಡ ಕಾರ್ಯಾಚರಣೆ ನಡೆಸಿತ್ತು.



