Home Karavali Karnataka ಬಂಟರ ಸಂಘ ಪಳ್ಳಿ – ನಿಂಜೂರು ವಲಯ (ರಿ) ವತಿಯಿಂದ ಸಸಿ‌ ನೆಡುವುದರ ಮೂಲಕ ವನ...

ಬಂಟರ ಸಂಘ ಪಳ್ಳಿ – ನಿಂಜೂರು ವಲಯ (ರಿ) ವತಿಯಿಂದ ಸಸಿ‌ ನೆಡುವುದರ ಮೂಲಕ ವನ ಮಹೋತ್ಸವ ಆಚರಣೆ…!!

ಮೂಡುಬೆಳ್ಳೆ : ಇಂದು ಬೆಳಿಗ್ಗೆ ಪಳ್ಳಿ – ನಿಂಜೂರು ವಲಯ(ರಿ) ಬಂಟರ ಸಂಘದ ವತಿಯಿಂದ ಸಸಿ ನೆಡುವುದರ ಮೂಲಕ ವನ ಮಹೋತ್ಸವ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಘದ ನೂತನ ಅಧ್ಯಕ್ಷರು ಹಾಗೂ ನಿಂಜೂರು Construction ಮಾಲೀಕರಾದ ಚಂದ್ರಶೇಖರ ಶೆಟ್ಟಿ ಅವರು ಗಿಡ ನೆಡುವುದರ ಮೂಲಕ ಚಾಲನೆಯನ್ನು ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಬಂಟ ಸಮಾಜ ಬಾಂಧವರು ಹಾಗೂ ಸಮಿತಿ ಸದಸ್ಯರು ಅವರೊಟ್ಟಿಗೆ ಕೈ ಜೋಡಿಸಿದರು. ಆಗಮಿಸಿರುವ ಎಲ್ಲರಿಗೂ ಸಂಘದ ಸ್ಥಾಪಕ ಅಧ್ಯಕ್ಷರು ಮನೋಹರ ಶೆಟ್ಟಿ ಪಳ್ಳಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಗೌರೀಶ್ ಶೆಟ್ಟಿ ನಿಂಜೂರು ಧನ್ಯವಾದವಿತ್ತರು. ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.