Home Crime ಪಡುಬಿದ್ರಿ : ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತ್ಯು…!!

ಪಡುಬಿದ್ರಿ : ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತ್ಯು…!!

ಪಡುಬಿದ್ರಿ : ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಹಳೇ ಎಂಬಿಸಿ ರಸ್ತೆಯ ಮುಂಭಾಗ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಸ್ಕೂಟ‌ರ್ ಸವಾರ ಹೆಜಮಾಡಿ ಕೋಡಿ ಮಾನಂಪಾಡಿ ನಿವಾಸಿ ತುಷಾರ್ (20) ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಕರ್ತವ್ಯ ನಿಮಿತ್ತ ತನ್ನ ಸ್ಕೂಟರ್‌ನಲ್ಲಿ ಹೆಜಮಾಡಿ ಒಳ ರಸ್ತೆಯ ಟೋಲ್‌ಗೇಟ್‌ನಿಂದ ಮೂಲ್ಕಿ ಕಡೆಗೆ ಹೆದ್ದಾರಿ ದಾಟುತ್ತಿದ್ದ ಸಂದರ್ಭ ಈ ಅವಘಡವು ಸಂಭವಿಸಿದೆ.

ಈ ಸಂದರ್ಭ ಸ್ಕೂಟರ್ ಬಸ್ಸಿನ ಮುಂಭಾಗದಲ್ಲಿ ಬಸ್ಸಿನಡಿಯಲ್ಲಿ ಸಿಲುಕಿತ್ತು. ಸ್ಕೂಟ‌ರ್ ಸವಾರ ತುಷಾರ್‌ಗೆ ತಲೆ ಮತ್ತು ಎದೆಗೆ ಗಂಭೀರ ಗಾಯವಾಗಿತ್ತು. ಅವರನ್ನು ತತ್‌ಕ್ಷಣ ಹೆಜಮಾಡಿ ಟೋಲ್ ಆ್ಯಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಅವರು ಮೃತಪಟ್ಟರು. ತುಷಾರ್, ನವಮಮಗಳೂರು ಬಂದರಿನಲ್ಲಿನ ಯೋಜಕ ಇಂಡಿಯಾ ಕಂಪೆನಿಯ ಉದ್ಯೋಗಿಯಾಗಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.