Home Crime ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್‌…!!

ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್‌…!!

ಮುಂಬೈ : ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಮುಂಬೈನ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

3.15 ಕೋಟಿ ಹಣ ವಂಚನೆ ಆರೋಪ ನಟ ಧ್ರುವ ಸರ್ಜಾ ಮೇಲೆ ಮಾಡಲಾಗಿದ್ದು, ಸಿನಿಮಾ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ದೂರನ್ನು ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ಹೊಸ ಸಿನಿಮಾ ಶೂಟಿಂಗ್‌ಗೆಂದು ಬರುವುದಾಗಿ ಹೇಳಿದ್ದು, ಅದಕ್ಕಾಗಿ 3.15ಕೋಟಿ ಅಡ್ವಾನ್ಸ್‌ ಹಣ ಪಡೆದು ಶೂಟಿಂಗ್‌ಗೆ ಬರಲಿಲ್ಲ ಎನ್ನುವ ಆರೊಪವನ್ನು ಹೊರಿಸಲಾಗಿದೆ.