Home Crime ಕೊಲ್ಲೂರು : ವ್ಯಕ್ತಿಯೊಬ್ಬರು ಆತ್ಮಹತ್ಯೆ : ಡೆತ್ ನೋಟ್ ನಲ್ಲಿ ಇಬ್ಬರು ಹೆಸರು ಉಲ್ಲೇಖ….!!

ಕೊಲ್ಲೂರು : ವ್ಯಕ್ತಿಯೊಬ್ಬರು ಆತ್ಮಹತ್ಯೆ : ಡೆತ್ ನೋಟ್ ನಲ್ಲಿ ಇಬ್ಬರು ಹೆಸರು ಉಲ್ಲೇಖ….!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ನಟೇಶ್ ಎಂದು ತಿಳಿಯಲಾಗಿದೆ.

ಸಾವನ್ನಪ್ಪಿದ ನಟೇಶ್ ಅವರ ತನ್ನ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣ ಎಂದು ಮೊಬೈಲ್ ನಲ್ಲಿ ಬರೆದು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕೊಲ್ಲೂರು ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ದಿನಾಂಕ 07/08/2025 ರಂದು ಬೆಳಿಗ್ಗೆ 6:00 ಗಂಟೆಗೆ ಮಧುಕರ (38),ಕೊಲ್ಲೂರು ಗ್ರಾಮ, ಬೈಂದೂರು ಇವರು ತನ್ನ ದೊಡ್ಡಮ್ಮನ ಮಗ ನಟೇಶ್ (36) ಕೊಲ್ಲೂರಿನ ಸಂಪ್ರೆ ಎಂಬಲ್ಲಿಯ ಸೌಪರ್ಣಿಕ ನದಿಯಲ್ಲಿ ಜ್ಯಾರಿ ಬಿದ್ದು ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹುಡುಕಾಡಿದಾಗ ನಟೇಶ ರವರ ಮೃತ ಶರೀರ ಕೊಲ್ಲೂರಿನ ಮಾವಿನಕಾರು ಸೇತುವೆ ಬಳಿ ಬೆಳಿಗ್ಗೆ 9:00 ಗಂಟೆಗೆ ನದಿಯಲ್ಲಿ ದೊರೆತಿದ್ದು ಕೊಲ್ಲೂರು ಠಾಣೆಯಲ್ಲಿ ಯುಡಿಆರ್ 16/2025 ರಂತೆ ಪ್ರಕರಣ ದಾಖಲಾಗಿರುತ್ತದೆ.

ನಟೇಶ್ ರವರು ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ ಅವರ ಕಾರಿನ ಬೀಗದ ಕೀ ಕಾರಿನಲ್ಲಿಯೇ ಇದ್ದು, ಇದನ್ನು ಅವರ ಮನೆಯ ಬಳಿ ನಿಲ್ಲಿಸಿದ್ದು ದಿನಾಂಕ 08/08/2025 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರು ನಟೇಶ್ ರವರ ಕಾರಿನ ಒಳಗೆ ನೋಡಿದಾಗ ಕಾರಿನ ಒಳಗೆ ನಟೇಶ್ ರವರು ಬಳಸುತ್ತಿದ್ದ ಮೊಬೈಲ್ ಮತ್ತು ಒಂದು ಸಣ್ಣ ಚೀಟಿ ದೊರೆತ್ತಿದ್ದು,ಅದರಲ್ಲಿ ಮೊಬೈಲ್ ಪಾಸ್ ವರ್ಡ್ ಇದ್ದು, ತನ್ನ ಸಾವಿನ ರಹಸ್ಸ ಮೊಬೈಲ್ ಗ್ಯಾಲರಿಯಲ್ಲಿದೆ ಎಂಬಿತ್ಯಾದಿಯಾಗಿ ಬರೆದಿರುವುದನ್ನು ನೋಡಿ ಮೊಬೈಲ್ ಅನ್ನು ಒಪನ್ ಮಾಡಿ ನೋಡಿದಾಗ ಅದರಲ್ಲಿನ ವಿಡಿಯೋ ತುಣುಕುಗಳಲ್ಲಿ ಸಂತು ಮತ್ತು ನಾಗೇಶ @ ದಳಿ-ನಾಗ ಇವರು ತನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇದ್ದು.

ನಟೇಶ್ ರವರ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣರಾಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2025 ಕಲಂ: 108 R/W 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.