ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ನಿತ್ಯೋತ್ಸವದಂತೆ ನಡೆಯುವ ರಥೋತ್ಸವ, ಹಾಗೂ ಅಷ್ಟಮಠಗಳ ಪರ್ಯಾಯೊತ್ಸವ, ಹೊರೆಕಾಣಿಕೆ ಸಮರ್ಪಣೆ, ಹಾಗೂ ಇನ್ನಿತರ ಧಾರ್ಮಿಕ ಉತ್ಸವ ಕಾರ್ಯಕ್ರಮಗಳ ಶೋಭಾಯಾತ್ರೆಯಲ್ಲಿ ಮುಂಚೂಣಿಯಲ್ಲಿದ್ದು, ಸುಭದ್ರೆ ಶುಭನಾಮದ ಆನೆ ಈ ಹಿಂದೆ ಭಕ್ತರ ಗಮನಸೆಳೆಯುತ್ತ ರಂಜಿಸುತಿತ್ತು. ಈವಾಗ ಕೆಲವು ವರ್ಷಗಳಿಂದ ಸುಭದ್ರೆ ಆನೆ ಕಾರಾಣಾಂತರಗಳಿಂದ ಸಕ್ರೆಬೈಲು ಆನೆಬಿಡಾರ ಸೇರಿ ಅಲ್ಲಿಂದ ಹೊನ್ನಾಳಿ ಸಮೀಪದ ಮಠವೊಂದರಲ್ಲಿ ಆಶ್ರಯ ಪಡೆದುಕೊಂಡಿತು.
ಈವಾಗ ಶ್ರೀಕೃಷ್ಣ ಮಠದಲ್ಲಿ ಆನೆ ಇಲ್ಲದೆ ಏನೋ ಅಮೂಲ್ಯ ವಸ್ತು ಕಳೆದುಕೊಂಡಿರುವ ಭಾವನೆ ಭಕ್ತರಲ್ಲಿ ಕಾಡುತ್ತಿದೆ. ಪರ್ಯಾಯ ಶ್ರೀ ಶಿರೂರು ಮಠವು ಶ್ರೀಕೃಷ್ಣ ಮಠಕ್ಕೆ ಸುಭದ್ರೆ ಆನೆ ಅಥವಾ ಬದಲಿ ಆನೆ ತರಿಸುವಲ್ಲಿ ಪ್ರಯತ್ನಿಸಿದಲ್ಲಿ ಭಕ್ತರು ಸಂತೋಷಗೊಳ್ಳುವರೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಪ್ರಾರ್ಥಿಸಿಕೊಂಡಿದ್ದಾರೆ.





