ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಕಾಣೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟ ವೃದ್ಧೆ ಸರಸ್ವತಿ ಎಂದು ತಿಳಿದು ಬಂದಿದೆ.
ಘಟನೆ ವಿವರ : ಪಿರ್ಯಾದಿದಾರರಾದ ವಸಂತರಾಯ (55),ಹಿರೇಬೆಟ್ಟು ಗ್ರಾಮ ಉಡುಪಿ ಇವರ ತಾಯಿ ಸರಸ್ವತಿ (93) ಇವರು ದಿನಾಂಕ 05/08/2025 ರಂದು 12:30 ಗಂಟೆಗೆ ನೆರೆ ಮನೆಯ ಶ್ಯಾಮ ರವರ ಮನೆಗೆ ಎಲೆ ಅಡಿಕರ ತಿಂದು ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದು , ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಸರಸ್ವತಿ ರವರನ್ನು ಹುಡುಕಾಡುತ್ತಿರುವಾಗ ದಿನಾಂಕ 08/08/2025 ರಂದು ಸಂಜೆ 18:20 ಗಂಟೆಗೆ ಪಿರ್ಯಾದಿದಾರರ ಮನೆಯ ಹಿಂಭಾಗದಲ್ಲಿ ಹರಿಯುತ್ತಿರುವ ಗಾರುಡಿ ತಕ್ಷುಮತಿ ಹೊಳೆಯ ನೀರಿನ ದಂಡೆಯ ಮೇಲೆ ಪೊದೆಯ ನಡುವಿನಲ್ಲಿ ಮೃತ ಶರೀರ ದೊರೆತಿರುತ್ತದೆ. ದಿನಾಂಕ 05/08/2025 ರಂದು ವಿಪರೀತ ಮಳೆಯಿದ್ದು ಮದ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ಮಧ್ಯದ ಅವಧಿಯಲ್ಲಿ ಶ್ಯಾಮ ರವರ ಮನೆಗೆ ಹೋಗಿ ಎಲೆ ಅಡಿಕೆ ತಿಂದು ಬಹಿರ್ದೆಸೆಗೆ ಹೊಳೆಯ ಬದಿಗೆ ಹೋದವರು ವಿಪರೀತ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಸಿಕ್ಕಿ ಹೊಳೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರಬಹುದಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.