Home Crime ಮಂಗಳೂರು : ಯುವತಿಯೊಬ್ಬಳು ನಾಪತ್ತೆ…!!

ಮಂಗಳೂರು : ಯುವತಿಯೊಬ್ಬಳು ನಾಪತ್ತೆ…!!

ಮಂಗಳೂರು : ನಗರದ ಸಮೀಪ ಯುಬತಿಯೊಬ್ಬಳು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿರುತ್ತಾರೆ. ತಡರಾತ್ರಿಯಾದರೂ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿ ಶಾಹಿನ ಬಾನು ಎಂದು ತಿಳಿಯಲಾಗಿದೆ.

ಮಂಗಳೂರು ಪೊಲೀಸ್ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಖೈರುನ್ನಿಸ ಮಹಮ್ಮದ್ ನಾಸೀರ ತನ್ನ ಪತಿ. ಇಬ್ಬರು ಗಂಡು ಮಕ್ಕಳು .ಹಾಗೂ ಒಬ್ಬಳು ಮಗಳೂಂದಿಗೆ ವಾಸವಾಗಿದ್ದು. ಪಿರ್ಯಾದಿದಾರರ ಮಗಳಾದ ಶಾಹಿನ ಬಾನು ದಿನಾಂಕ :07/08/2025 ರಂದು ಬೆಳಗ್ಗೆ 11;00 ಗಂಟೆಗೆ, ಪಿರ್ಯಾದಿದಾರರಿಗೆ ನಾನು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿರುತ್ತಾರೆ. ತಡರಾತ್ರಿಯಾದರೂ ಮನೆಗೆ ಬಾರದೆ ಇರುವುದರಿಂದ, ಪಿರ್ಯಾದಿದಾರರು ಹಾಗೂ ಅವರ ಮನೆಯವರು ನೆರೆಕರೆ ಮನೆಯವರಲ್ಲಿ ವಿಚಾರಿಸಿ ಸುತ್ತ ಮುತ್ತ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ತಿಳಿದಿರುವುದಿಲ್ಲ ಆದ್ದರಿಂದ ಕಾಣೆಯಾದ ಶಾಹಿನ ಬಾನು ಪ್ರಾಯ:23 ವರ್ಷ ರವರನ್ನು ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.

ಕಾಣೆಯಾದವರ ಚಹರೆ ವಿವರ:ಹೆಸರು: ಶಾಹಿನ ಬಾನು, ಪ್ರಾಯ:23 ವರ್ಷ, ಎತ್ತರ: 4.8 ಅಡಿ, ಬಣ್ಣ:ಗೋದಿ ಮೈ ಬಣ್ಣ, ಶರೀರ:ಸಾದಾರಣ ಮೈಕಟ್ಟು,ಕುದಲು: ಕಪ್ಪು ಕೂದಲು, ಧರಿಸಿದ ಬಟ್ಟೆ; ನಿಲಿ ಬಣ್ಣದ ಜೀನ್ಸ ಪ್ಯಾಂಟ್ ಹಾಗು ಬಿಳಿ ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಬುರ್ಖಾ ಬಾಷೆ:ಕನ್ನಡ ,ತುಳು,ಹಿಂದಿ,ಇಂಗ್ಲೀಷ್,ಬ್ಯಾರಿ ಭಾಷೆ ಮಾತನಾಡಬಲ್ಲವರು