Home Crime ಕಾರ್ಕಳ: ಗೋಕಳ್ಳರ ಬಂಧನಕ್ಕೆ ಆಗ್ರಹಿಸಿ ತಹಶೀಲ್ದಾರ್‌, ಎಎಸ್‌ಪಿಗೆ ಮನವಿ…!!

ಕಾರ್ಕಳ: ಗೋಕಳ್ಳರ ಬಂಧನಕ್ಕೆ ಆಗ್ರಹಿಸಿ ತಹಶೀಲ್ದಾರ್‌, ಎಎಸ್‌ಪಿಗೆ ಮನವಿ…!!

ಕಾರ್ಕಳ : ಇತ್ತೀಚೆಗೆ ನಿರಂತರವಾಗಿ ಗೋಕಳ್ಳತನ ನಡೆಯುತ್ತಿದ್ದು ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಪರ ಸಂಘಟನೆ ಪ್ರಮುಖರು ತಹಶೀಲ್ದಾರ್‌ ಪ್ರದೀಪ್‌ ಆರ್.‌ ಹಾಗೂ ಎಎಸ್‌ಪಿ ಡಾ. ಹರ್ಷ ಪ್ರಿಯಂವದ ಅವರಿಗೆ ಮನವಿ ಸಲ್ಲಿಸಿದರು.

ಶಿರ್ಲಾಲು ಗ್ರಾಮದಲ್ಲಿ ಹೈನುಗಾರಿಕೆ ನಡೆಸುತ್ತ ಜೀವನ ಸಾಗಿಸುತ್ತಿದ್ದ ಮಹಿಳೆಯ ಮನೆಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದನಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಮಾಸುವ ಮುನ್ನವೇ ಇದೀಗ ನಲ್ಲೂರಿನ ಅಶ್ರಫ್‌ ನ ತೋಟದಲ್ಲಿ ಅಕ್ರಮವಾಗಿ ಕಸಾಯಿಖಾನೆ ಮಾಡಿಕೊಂಡು ದನ ಕಡಿಯಲಾಗುತ್ತಿದೆ.

ದುಷ್ಕರ್ಮಿಗಳು ಕಾನೂನಿನ, ಪೋಲಿಸರ ಭಯವಿಲ್ಲದೇ ದನ ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನ ಹಲವೆಡೆ ಇಂತಹ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಕಾರ್ಕಳದ ಶಾಂತಿಗೆ ಭಂಗ ಒಡ್ಡುತ್ತಿದ್ದಾರೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೋರಾಟದ ಎಚ್ಚರಿಕೆ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ವಿರುದ್ಧ, ಗೋಕಳ್ಳರು, ದನದ ಮಾಂಸ ಮಾರಾಟ ಮಾಡುವವರ ವಿರುದ್ಧ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳದೇ ಹೋದರೆ ಇಡೀ ಹಿಂದೂ ಸಮಾಜ, ಸಂಘಟನೆಗಳು ಹೋರಾಟ ಮಾಡಲಿವೆ ಎಂದು ವಿಶ್ವ ಹಿಂದೂ ಪರಿಷತ್‌, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಪ್ರಮುಖರಾದ ಸುನಿಲ್‌ ಕೆ.ಆರ್‌., ಸುಧೀರ್‌ ನಿಟ್ಟೆ, ಚೇತನ್‌ ಪೇರಲ್ಕೆ, ರತ್ನಾಕರ್‌ ಅಮೀನ್‌, ರಮೇಶ್‌ ಕಲ್ಲೊಟ್ಟೆ, ಸುಜಿತ್‌ ಸಫಲಿಗ, ರಾಘವೇಂದ್ರ ಕುಲಾಲ್‌, ಪ್ರಸಾದ್‌, ಯಶೋಧರ್‌, ಶರತ್‌, ಗುರುಪ್ರಸಾದ್‌ ಸೂಡ, ಹರೀಶ್‌ ಬಜಗೋಳಿ, ಮನೋಜ್‌ ಮೊದಲಾದವರು ಉಪಸ್ಥಿತರಿದ್ದರು.