Home Crime ಜಮ್ತಾರಾ 2 ವೆಬ್ ಸಿರೀಸ್ ನಟ ಸಚಿನ್ ಚಂದವಾಡೆ ಆತ್ಮಹತ್ಯೆ…!!

ಜಮ್ತಾರಾ 2 ವೆಬ್ ಸಿರೀಸ್ ನಟ ಸಚಿನ್ ಚಂದವಾಡೆ ಆತ್ಮಹತ್ಯೆ…!!

ಮುಂಬೈ : ಸೈಬರ್ ವಂಚನೆ ಬಗ್ಗೆ ನೆಟ್ ಪ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ಒಟಿಟಿ ವೆಬ್ ಸಿರೀಸ್ ಜಮ್ತಾರಾ 2’ ಮರಾಠಿ ನಟ ಸಚಿನ್ ಚಂದವಾಡೆ (25) ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಸಚಿನ್ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪರೋಲಾದ ಉಂಡಿರ್ಖೇಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ನಿವಾಸದಲ್ಲಿ ಅ. 23ರಂದು ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಳಿಕ ಕುಟುಂಬಸ್ಥರು ಸಚಿನ್ ಅವರನ್ನು ಧುಲೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅ. 24ರಂದು ಬೆಳ್ಳಗಿನ ಸಮಯದಲ್ಲಿ ಮೃತರಾಗಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.

ಮೃತರಾಗುವ ಕೆಲವು ದಿನಗಳ ಮೊದಲು, ಸಚಿನ್ ಚಂದವಾಡೆ ಅವರು ತಮ್ಮ ಮುಂಬರುವ ಮರಾಠಿ ಚಿತ್ರ ‘ಅಸುರ್ವಾನ್‘ ಸಿನಿಮಾದ ಪೋಸ್ಟರ್ ಹಿಡಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇವರು ನಟನೆಯ ಜೊತೆಗೆ, ಚಂದವಾಡೆ ಪುಣೆಯ ಕಂಪನಿಯೊಂದರಲ್ಲಿ ಐಟಿ ವೃತ್ತಿಪರ ಕೆಲಸ ಮಾಡುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.