Home Crime ಕಾಸರಗೋಡು: ವ್ಯಕ್ತಿಯ ಮೃತದೇಹ ಪತ್ತೆ…!

ಕಾಸರಗೋಡು: ವ್ಯಕ್ತಿಯ ಮೃತದೇಹ ಪತ್ತೆ…!

ಕಾಸರಗೋಡು: ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಚಟ್ಟಂಚಾಲ್ ಮಂಡಲಪ್ಪಾರ ಬಳಿ ನಡೆದಿದೆ.

ಮೃತರನ್ನು ಮಂಡಲಪ್ಪಾರ ನಿವಾಸಿ ಶಬೀರ್ (40) ಎಂದು ಗುರುತಿಸಲಾಗಿದೆ.

ಇಲ್ಲಿನ ಸೇತುವೆಯೊಂದರ ಬಳಿ ಮೃತದೇಹ ಪತ್ತೆಯಾಗಿದ್ದು, ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಅಲ್ಲದೇ ಸಮೀಪದಲ್ಲೇ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮೇಲ್ಪರಂಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.