Home Crime ಕುಂದಾಪುರ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ..!

ಕುಂದಾಪುರ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ..!

CREATOR: gd-jpeg v1.0 (using IJG JPEG v62), quality = 60

ಕುಂದಾಪುರ: ಮದ್ಯಪಾನದ ಚಟದಿಂದ ಖಿನ್ನತೆಗೆ ಒಳಗಾದ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಹೊಕ್ಕಲು ಮನೆ, ಕೋಣಿ ಗ್ರಾಮದ ಎಂ. ಸಂಜೀವ ಪೂಜಾರಿ (68) ಮೃತ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರ ಪುತ್ರಿ ಕವಿತ (32) ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಪ್ರಕಾರ, ಸಂಜೀವ ಪೂಜಾರಿ ಅವರಿಗೆ ದೀರ್ಘಕಾಲದಿಂದ ಮದ್ಯಪಾನದ ಚಟವಿದ್ದು, ಇದರಿಂದಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದರು. ಏಪ್ರಿಲ್ 18ರಂದು ಮಧ್ಯಾಹ್ನ 2:45 ರಿಂದ 4:30ರ ನಡುವಿನ ಅವಧಿಯಲ್ಲಿ ಮನೆಯೊಳಗಿನ ಕೊಠಡಿಯಲ್ಲಿ ಪ್ಯಾನಿಗೆ ವೈಯರ್ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.