Home Crime ವಿಷಕಾರಿ ಹಾವು ಕಚ್ಚಿ ಬಾಲಕಿ ಮೃತ್ಯು…!!

ವಿಷಕಾರಿ ಹಾವು ಕಚ್ಚಿ ಬಾಲಕಿ ಮೃತ್ಯು…!!

ಅಮಾಸೆಬೈಲು: ಮನೆಯ ಪಕ್ಕದ ತೋಟದಲ್ಲಿ ಬಾಲಕಿಯೊಬ್ಬಳಿಗೆ ವಿಷಕಾರಿ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಕುಂದಾಪುರ ಸಮೀಪ ಅಮಾಸೆಬೈಲು ಎಂಬಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿ ಸನ್ನಿಧಿ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಶ್ರೀಧರ (45), ಶೇಡಿಮನೆ ಗ್ರಾಮ, ಹೆಬ್ರಿ ಇವರು ಕೃಷಿ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ 03/08/2025 ರಂದು ತನ್ನ ಮನೆಯ ಪಕ್ಕದ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಪಿರ್ಯಾದಿದಾರರ ಮಗಳಾದ ಸನ್ನಿಧಿ (08) ಇವಳಿಗೆ ಈ ದಿನ ಶಾಲೆಗೆ ರಜೆ ಇದ್ದ ಕಾರಣ ತಂದೆಯ ಜೊತೆ ತೋಟದಲ್ಲಿದ್ದಾಗ 11:00 ಗಂಟೆಯ ಸಮಯಕ್ಕೆ ಯಾವುದೋ ವಿಷಕಾರಿ ಹಾವು ಕಚ್ಚಿರುವುದಾಗಿ ಹೇಳಿ ಓಡಿ ಮನೆಗೆ ಬಂದವಳನ್ನು ನೋಡಿದಾಗ ಬಲಕಾಲಿನ ಮಣಿಗಂಟಿನ ಬಳಿ ಗಾಯವಾಗಿ ರಕ್ತ ಬರುತ್ತಿದ್ದು, ಪಿರ್ಯಾದುದಾರರು ಕೂಡಲೇ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.