ಕೋಟ: ಉಡುಪಿ ಜಿಲ್ಲೆಯ ಕುಂದಾಪುರದ ಕೋಟ ಸಮೀಪ ಪಾದಚಾರಿಯೊಬ್ಬರಿಗೆ ಬೈಕೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಹರ್ಕಾಡಿ ಗ್ರಾಮದ ನಿವಾಸಿ ಕೃಷ್ಣ ಆಚಾರ್ಯ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ : ಪಿರ್ಯಾದಿ ಅವಿನಾಶ ಆಚಾರ್ಯ, ಪ್ರಾಯ 31 ವರ್ಷ, ಹರ್ಕಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ: 30.07.2025 ರಂದು ರಾತ್ರಿ ಸಮಯ ಸುಮಾರು 09:30 ಗಂಟೆಗೆ ಅವರ ಮನೆಯ ಬಳಿ ನಿಂತುಕೊಂಡಿರುವಾಗ , KA20EJ4886 ನೇ ಮೋಟಾರ್ ಸೈಕಲ್ ಸವಾರ ವಾಸುದೇವ ಆಚಾರ್ಯ ರವರು ಹಳ್ಳಾಡಿ ಕಡೆಯಿಂದ -ಬಿದ್ಕಲಕಟ್ಟ ಕಡೆಗೆ ತಾವು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಸವಾರಿ ಮಾಡಿಕೊಂಡು ಬಂದು ,ಹಳ್ಳಾಡಿ ಬ್ರಿಡ್ಜ್ ಬಳಿ ಹಳ್ಳಾಡಿ ಕಡೆಯಿಂದ ಬಿದ್ಕಲಕಟ್ಟೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣ ಆಚಾರ್ಯ ರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿರುತ್ತಾರೆ.ಪರಿಣಾಮ ಕೃಷ್ಣ ಆಚಾರ್ಯ ರವರು ರಸ್ತೆಗೆ ಬಿದ್ದು ಅವರ ತಲೆಗೆ ರಕ್ತ ಗಾಯವಾಗಿದ್ದು,ಗಾಯಗೊಂಡ ಕೃಷ್ಣ ಆಚಾರ್ಯ ರವರನ್ನು ಪಿರ್ಯಾದಿದಾರರು ಹಾಗೂ ಸೇರಿದ ಜನರು ಚಿಕಿತ್ಸೆ ಬಗ್ಗೆ ಒಂದು ಕಾರಿನಲ್ಲಿ ಹಾಲಾಡಿ ದುರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಕೃಷ್ಣ ಆಚಾರ್ಯ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಪಿರ್ಯಾದಿದಾರರು ಕೃಷ್ಣ ಆಚಾರ್ಯ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಕೃಷ್ಣ ಆಚಾರ್ಯ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಆಚಾರ್ಯ ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:31.07.2025 ರಂದು ಬೆಳ್ಳಿಗ್ಗೆ 05:30 ಗಂಟೆಗೆ ಮೃತರಾಗಿರುತ್ತಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 137/2025 ಕಲಂ: 281, 106 BNS ನಂತೆ ಪ್ರಕರಣ ದಾಖಲಾಗಿರುತ್ತದೆ.