ಸುಳ್ಯ : ಅಕ್ರಮವಾಗಿ ಕೆಂಪುಕಲ್ಲನ್ನು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ರವಿವಾರ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಡೆದಿದೆ.
ಎರಡು ಲಾರಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಎಲ್ಲಿಂದಲೋ ಕದ್ದು ಸಾಗಾಟ ಮಾಡುತ್ತಿದ್ದಾಗ, ಸಂತೋಷ ಕುಮಾರ್ ಬಿ ಪಿ, ಪಿ ಎಸ್ ಐ ( ಕಾ&ಸು) ಸುಳ್ಯ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ ಪತ್ತೆ ಮಾಡಿ, ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಲಾರಿಗಳನ್ನು ಹಾಗೂ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.