Home Crime ಕಾರ್ಕಳದ ಬೋಳದಲ್ಲಿ ಪೈಪ್ ಮೇಲೆತ್ತಲು ಹೋದ ಬಾಲಕ ಬಾವಿಗೆ ಬಿದ್ದು ಮೃತ್ಯು…!

ಕಾರ್ಕಳದ ಬೋಳದಲ್ಲಿ ಪೈಪ್ ಮೇಲೆತ್ತಲು ಹೋದ ಬಾಲಕ ಬಾವಿಗೆ ಬಿದ್ದು ಮೃತ್ಯು…!

ಕಾರ್ಕಳ : ಬಾವಿಯಲ್ಲಿ ಪಂಪ್ ಸೆಟ್ ಗೆ ಅಳವಡಿಸಿದ್ದ ಪೈಪ್ ಮೇಲೆತ್ತಲು ಹೋದ ಬಾಲಕ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎಂಬಲ್ಲಿ ಭಾನುವಾರ (ಏ.12) ನಡೆದಿದೆ.

ಬೋಳ ರಾಜೇಶ್ ಶೆಟ್ಟಿ ಮತ್ತು ತ್ರಿವೇಣಿ ದಂಪತಿಯ ಪುತ್ರ ರಿತಿಕ್ ಆರ್ ಶೆಟ್ಟಿ ಮೃತಪಟ್ಟ ಬಾಲಕ ಎಂದು ತಿಳಿಯಲಾಗಿದೆ.

ರಾಜೇಶ್ ಶೆಟ್ಟಿ ಅವರು ತೋಟಕ್ಕೆ ನೀರು ಬಿಡಲು ಬಾವಿಗೆ ಪಂಪ್ ಸೆಟ್ ಅಳವಡಿಸಿದ್ದು ನಿನ್ನೆ ಪಂಪ್ ಆನ್ ಮಾಡಿದಾಗ ನೀರು ಬಾರದೆ ಇದ್ದ ಕಾರಣ ಅವರ ಮಕ್ಕಳು ರಿತಿಕ್ ಮತ್ತು ರಿತೇಶ್ ಬಾವಿಯ ಬಳಿ ಹೋಗಿದ್ದರು. ಪಂಪ್ ನಲ್ಲಿ ನೀರು ಬರದೆ ಇದ್ದ ಕಾರಣ ರಿತಿಕ್ ಬಾವಿಯಲ್ಲಿ ಅಳವಡಿಸಿದ್ದ ಪೈಪನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.