Home Latest ತಾಸೆ ಕಲಾವಿದ ಅವಿನಾಶ್ ಸೇರಿಗಾರ ನಿಧನ…!!

ತಾಸೆ ಕಲಾವಿದ ಅವಿನಾಶ್ ಸೇರಿಗಾರ ನಿಧನ…!!

ಮಣಿಪಾಲ : ಪರ್ಕಳದ ದೇವಸ್ಥಾನ ಬೆಟ್ಟು ನಿವಾಸಿ ತಾಸೆ ವಾದಕ ಅವಿನಾಶ್ ಸೇರಿಗಾರ (33) ಅವರು ಅನಾರೋಗ್ಯದಿಂದ ಭಾನುವಾರ (ಏಪ್ರಿಲ್ 12) ಸಂಜೆ ನಿಧನರಾದರು.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅವಿವಾಹಿತರಾಗಿದ್ದ ಅವಿನಾಶ್, ಪರ್ಕಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ನಾಗಸ್ವರ ವಾದಕರೊಂದಿಗೆ ತಾಸೆ ಹಾಗೂ ಇತರ ವಾದ್ಯಗಳನ್ನು ನುಡಿಸುತ್ತಿದ್ದರು. ಉಳಿದ ಸಮಯದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ದಿವಂಗತ ದಾಸ ಸೇರಿಗಾರರ ಪುತ್ರರಾದ ಅವರು, ತಾಯಿ, ಒಬ್ಬ ಅಣ್ಣ ಹಾಗೂ ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ. ಕುಟುಂಬದಲ್ಲಿ ಕಿರಿಯರಾಗಿದ್ದರು.

ಮೃತರ ಅಂತ್ಯಕ್ರಿಯೆ ಇಂದು ನೆರವೇರಿಸಲಾಯಿತು.