Home Crime ಸ್ಕೂಟರ್ ಗೆ ಟೆಂಪೋ ಟ್ರಾವೆಲರ್ ಢಿಕ್ಕಿ : ಸವಾರ ಸಾವು…!!

ಸ್ಕೂಟರ್ ಗೆ ಟೆಂಪೋ ಟ್ರಾವೆಲರ್ ಢಿಕ್ಕಿ : ಸವಾರ ಸಾವು…!!

ಕಾಪು: ಉಡುಪಿ ಜಿಲ್ಲೆಯ ಕಾಪು ಹತ್ತಿರ ಟೆಂಪೋ ಟ್ರಾವೆಲರ್ ಒಂದು ಸ್ಕೂಟರ್ ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದ ಸ್ಕೂಟರ್ ಸವಾರ ಸೋಮನಾಥ ಎಲ್ ಸಾಲ್ಯಾನ್ ಎಂದು ತಿಳಿದು ಬಂದಿದೆ.

ಕಾಪು ಪೊಲೀಸರು ಘಟನೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 02-07-2025ರಂದು ಪಿರ್ಯಾದಿ ಪ್ರಶಾಂತ್‌ ಅಮಿನ್ (39) ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಕೆಲಸದ ನಿಮಿತ್ತ ಉಡುಪಿಯಿಂದ ಪಾದೂರಿಗೆ ಹೋಗಿ ಅಲ್ಲಿಂದ ವಾಪಸ್ಸು ಕಾಪುಗೆ ಬಂದು ಪಡುಬಿದ್ರಿಗೆ ಹೋಗುವರೇ ತಮ್ಮ ಕಾರಿನಲ್ಲಿ ರಾ.ಹೆ-66 ಉಡುಪಿ-ಮಂಗಳೂರು ರಸ್ತೆಯಲ್ಲಿ ಹೊರಟು ಬೆಳಿಗ್ಗೆ 6.00 ಗಂಟೆಗೆ ಕಾಪು ತಾಲೂಕು ಕಾಪು ಪಡು ಗ್ರಾಮದ ಶ್ರೀ ಕಾಳಿಕಾಂಬಾ ಆಟೋ ವರ್ಕ್ಸ್‌ ಶಾಪ್‌ ನ ಎದುರು ತಲುಪುವಾಗ ರಾ.ಹೆ-66 ಮಂಗಳೂರು-ಉಡುಪಿ ರಸ್ತೆಯ ತೀರ ಎಡಬದಿಯಲ್ಲಿ ಸೋಮನಾಥ ಎಲ್‌ ಸಾಲ್ಯಾನ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20 EP3728 ನೇ ಸ್ಕೂಟರ್‌ ಗೆ KL46 P2080 ನೇ ಟೆಂಪೊ ಟ್ರಾವೆಲ್‌ ಚಾಲಕ ಅಥುಲ್‌ ಕೆ ಬಿ ಎಂಬಾತನು ತನ್ನ ಟೆಂಪೋವನ್ನು ತೀವ್ರ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸೋಮನಾಥ ಎಲ್‌ ಸಾಲ್ಯಾನ್ ರವರಿಗೆ ತಲೆಯ ಹಿಂಬದಿಗೆ ತೀವ್ರ ರಕ್ತಗಾಯವಾಗಿ ರಕ್ತ ಸುರಿಯುತ್ತಿದ್ದು ಪಿರ್ಯಾದುದಾರರು ಹಾಗೂ ಅಲ್ಲಿನ ಸ್ಥಳೀಯರು ಸೇರಿ ಸೋಮನಾಥ ಎಲ್‌ ಸಾಲ್ಯಾನ್ ರವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೋಂಡು ಹೋಗಿದ್ದು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಸೋಮನಾಥ ಎಲ್‌ ಸಾಲ್ಯಾನ್ ರವರು ಚಿಕಿತ್ಸೆಗೆ ಸ್ಪಂದಿಸದೇ ಬೆಳಿಗ್ಗೆ 7.31 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 97/2025 ಕಲಂ: 281, 106 (1) BNS ನಂತೆ ಪ್ರಕರಣ ದಾಖಲಾಗಿರುತ್ತದೆ.