Home Karavali Karnataka ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಪ್ರತಿಭಟನೆ…!!

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಪ್ರತಿಭಟನೆ…!!

ಬೈಂದೂರು: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಕಾಶ್ಮೀರದ ಪಹಲ್ಯಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಮುಸಲ್ಮಾನ್ ಉಗ್ರರು ನಡೆಸಿದ ಧರ್ಮಧಾರಿತ ನರಮೇಧವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು
ದಿನಾಂಕ : 23-04-2025, ಯುವಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷರಾದ ಗಜೇಂದ್ರ ಎಸ್ ಬೇಲೆಮನೆ ಅವರ ನೇತೃತ್ವದಲ್ಲಿ ಉಪ್ಪುಂದ ದ ಕಾರ್ಯಕರ್ತ ಕಚೇರಿಯಲ್ಲಿ ನಡೆಯಿತು.

ಈ ವಿದ್ವಂಸಕ ಘಟನೆಯನ್ನು ಉದ್ದೇಶಿಸಿ ಬೈಂದೂರಿನ ಶಾಸಕದಾದ ಗುರುರಾಜ ಗಂಟಿಹೊಳೆ ಅವರು ಮತಾಂಧ ಇಸ್ಲಾಮಿಕ್ ಭಯೋತ್ಪಾದಕರಿಗೆ ಎಚ್ಚರಿಕೆಯನ್ನು ನೀಡಿದರು,

ಈ ಸಂದರ್ಭದಲ್ಲಿ , OBC ಮೋರ್ಚಾ ಅಧ್ಯಕ್ಷರಾದ ಶಿವರಾಜ್ ಪೂಜಾರಿ, SC ಮೋರ್ಚಾ ಅಧ್ಯಕ್ಷರಾದ ಅಶೋಕ್ ND, ಬಿಜೆಪಿ ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ನೆಲ್ಯಾಡಿ, ಶಾಂತಿ ಖಾರ್ವಿ ಗಂಗೊಳ್ಳಿ, ಅಶೋಕ್ ದೇವಾಡಿಗ ಕಂಚಿಕಾನ್, ಕೃಷ್ಣ ಖಾರ್ವಿ ಕೊಡಿರಿ, ಅಶೋಕ್ ನಾಡ, ರವಿಚಂದ್ರ ವಿ. ಕೆ, ಗೋಪಾಲ್ ಪೂಜಾರಿ ವಸ್ರೆ, ದಿವಾಕರ್ ಶೆಟ್ಟಿ, ಪ್ರದೀಪ್ ಉಪ್ಪುಂದ, ಜಗದೀಶ್ ಆಲಂದೂರ್, ಅನುರ ಮೆಂಡನ್, ಜಯಂತ್ ಗಂಗೊಳ್ಳಿ, ಮಹೇಶ್ ಪೈ ಹಾಗೂ ಬಿಜೆಪಿ ಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.