Home Crime ಉಪ್ಪಿನಂಗಡಿ: ಮಾನಭಂಗ ಪ್ರಕರಣ : ಆರೋಪಿಗೆ ಜಾಮೀನು…!!

ಉಪ್ಪಿನಂಗಡಿ: ಮಾನಭಂಗ ಪ್ರಕರಣ : ಆರೋಪಿಗೆ ಜಾಮೀನು…!!

ಪುತ್ತೂರು: ಉಪ್ಪಿನಂಗಡಿ ಬೊಳ್ಳಾವು ಎಂಬಲ್ಲಿ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಫೆಬ್ರವರಿ 11 ರಂದು ಬೆಳಿಗ್ಗೆ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದ ಸಂದರ್ಭ ಧರ್ನಪ್ಪ ನಾಯ್ಕ ಎಂಬಾತ ನನ್ನ ಬಳಿ ಬಂದು ನನ್ನ ಬಟ್ಟೆಯನ್ನು ಹರಿದು ಹಾಕಿ ಮೈಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿ ಅವಾಚ್ಯವಾಗಿ ಬೈದು, ತೋಟಕ್ಕೆ ನೀರು ಬಿಡುವ ಜೆಟ್ ನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸುಮಿತ್ರಾ ಎಂಬವರು ಪೊಲೀಸರಿಗೆ ನೀಡಿದ್ದರು

ತಾನು ಬೊಬ್ಬೆ ಹೊಡೆದಾಗ ಮೈದುನ ಅಲ್ಲಿಗೆ ಬರುವುದನ್ನು ನೋಡಿ ಆರೋಪಿಯು ಜೀವ ಬೆದರಿಕೆ ಹಾಕಿ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಉಪ್ಪಿನಂಗಡಿ ಪೊಲೀಸರು ಆರೋಪಿ ವಿರುದ್ಧ ಅ.ಕ್ರ 0020/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ಆರೋಪಿ ಧರ್ನಪ್ಪ ನಾಯ್ಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿ, ವಿಚಾರಣೆ ನಡೆಸಿದ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಆರೋಪಿತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿತ ಧರ್ನಪ್ಪ ನಾಯ್ಕ್ ಪರವಾಗಿ ‘ಕಜೆ ಲಾ ಛೇಂಬರ್’ ಇದರ ಮುಖ್ಯಸ್ಥರಾದ ನ್ಯಾಯಾವಾದಿ ಮಹೇಶ್ ಕಜೆ ವಾದಿಸಿದ್ದರು.