ಉಡುಪಿ: ನಗರದಲ್ಲಿ ಟ್ರಾಕ್ಟರ್-ಟ್ರಾಲಿ ಅಪಘಾತಗೊಂಡ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದವರು ಸಂಗಪ್ಪ ಕಿರಾಸುರ್ ಎಂದು ತಿಳಿಯಲಾಗಿದೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ಮಾರುತಿ ಕಿರಾಸುರ್(26), ಮಣಿಪಾಲ, ಉಡುಪಿ ಇವರ ತಂದೆ ಸಂಗಪ್ಪ ಕಿರಾಸುರ್ (54) ರವರು ಮಾಂಡವಿ ಬಿಲ್ಡರ್ಸ್ ನಲ್ಲಿ KA-17-TA-2353 ನೇ ನಂಬ್ರ ಟ್ರಾಕ್ಟರ್-ಟ್ರಾಲಿ ಯಲ್ಲಿ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಾಂಡವಿ ಬಿಲ್ಡಿಂಗ್ ಗೆ ಸಂಬಂಧಿಸಿದ ಸಿಮೆಂಟ್ ಬ್ಲಾಕ್ ಗಳನ್ನು ಟ್ರಾಲಿಯಲ್ಲಿ ತುಂಬಿಸಿಕೊಂಡು ಟ್ರಾಕ್ಟರ್ ಚಲಾಯಿಸಿಕೊಂಡು ಉಡುಪಿ-ಮಣಿಪಾಲ ಪರಿಸರದಲ್ಲಿ ಮಾಂಡವಿ ಬಿಲ್ಡರ್ಸ್ ರವರು ನಿರ್ಮಾಣ ಮಾಡುತ್ತಿರುವ ಬಿಲ್ಡಿಂಗ್ ಗಳಿಗೆ ಸಾಗಾಟ ಮಾಡುತ್ತಿರುವುದಾಗಿದೆ, ಎಂದಿನಂತೆ ದಿನಾಂಕ 01/08/2025 ರಂದು ಬೆಳಿಗ್ಗೆ ಸಂಗಪ್ಪ ಕಿರಾಸುರ್ ರವರು ಕೆಲಸಕ್ಕೆ ಹೋಗಿದ್ದು, ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಿಂದ ಸಿಮೆಂಟ್ ಬ್ಲಾಕ್ ಗಳನ್ನು ಟ್ರಾಲಿಯಲ್ಲಿ ತುಂಬಿ KA-17-TA-2353 ನೇ ನಂಬ್ರ ಟ್ರಾಕ್ಟರ್ ನ್ನು ಚಲಾಯಿಸಿಕೊಂಡು ಸಂಜೆ 4 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಮಾಂಡವಿ ಕ್ಯಾಪಿಟಲ್ ಕಟ್ಟಡದ ತಳಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ರ್ಯಾಂಪ್ ನಲ್ಲಿ ಟ್ರಾಕ್ಟರ್ ನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಟ್ರಾಕ್ಟರ್ ನ ಮಷಿನ್ ನ ಮುಂಭಾಗ ಮೇಲಕ್ಕೆ ಎದ್ದಿದ್ದರಿಂದ ಸಂಗಪ್ಪ ಕಿರಾಸುರ್ ರವರು ಟ್ರಾಕ್ಟರ್ ಹಾಗೂ ಟ್ರ್ಯಾಲಿ ನಡುವೆ ಬಿದ್ದು ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು, ಕೂಡಲೇ ಸಂಗಪ್ಪ ಕಿರಾಸುರ್ ರವರನ್ನು ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿರುವುದಾಗಿ ಮಾಂಡವಿ ಕ್ಯಾಪಿಟಲ್ ಕಟ್ಟಡದ ಸುಪರವೈಸರ್ ಆದ ಗಣೇಶ್ ರವರು ಪಿರ್ಯಾದಿದಾರರಿಗೆ ತಿಳಿಸಿದ್ದು, ನಂತರ ಪಿರ್ಯಾದಿದಾರರು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಸಂಗಪ್ಪ ರವರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೃತ ಸಂಗಪ್ಪ ಕಿರಾಸುರ್ ರವರು ಯಾವುದೇ ಸೂಕ್ತ ಮುಂಜಾಗೃತ ಕ್ರಮವನ್ನು ಹಾಗೂ ಸುರಕ್ಷತಾ ಕ್ರಮವನ್ನು ಅನುಸರಿಸದೇ ನಿರ್ಲಕ್ಷತನದಿಂದ ಟ್ರಾಕ್ಟರ್ ನ್ನು ಟ್ರಾಲಿಯೊಟ್ಟಿಗೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿರುವುದೇ ಘಟನೆಗೆ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2025 ಕಲಂ: 106(1))BNS ರಂತೆ ಪ್ರಕರಣ ದಾಖಲಾಗಿರುತ್ತದೆ.