Home Crime ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ : ದೂರುದಾರ ತೋರಿಸಿದ ಜಾಗ ಪಾಯಿಂಟ್ ನಂ 6ರಲ್ಲಿ ಸಿಕ್ಕ...

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ : ದೂರುದಾರ ತೋರಿಸಿದ ಜಾಗ ಪಾಯಿಂಟ್ ನಂ 6ರಲ್ಲಿ ಸಿಕ್ಕ ಮೂಳೆಗಳು…!!

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಯುತ್ತಿರುವ ಕಳೇಬರ ಶೋಧ ಕಾರ್ಯವು ಆರಂಭದಲ್ಲೇ ಮಹತ್ವದ ತಿರುವು ನೀಡಿದೆ.

ದೂರುದಾರ ತೋರಿಸಿದ ಜಾಗ ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೂರುದಾರನ ಪರ ವಕೀಲರಾದ ಧೀರಜ್ ಹಾಗೂ ವಿಶ್ವಾಸ್‌ ದೌಡಾಯಿಸಿದ್ದಾರೆ.

ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಕೆಲವು ಮೂಳೆಗಳು ಸಿಕ್ಕಿದೆ ಎಂದು ವರದಿಯಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಎಫ್ಎಸ್ಎಲ್ ತಂಡ ಮೂಳೆಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ.