ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಲಯನ್ಸ್ ಕ್ಲಬ್ ಶಿರ್ವ ಮಂಚಕಲ್ ಅತಿಥ್ಯದಲ್ಲಿ ಡಿಸೆಂಬರ್ 23 ರಂದು ನಡೆಯುವ ಲಯನ್ಸ್ ಜಿಲ್ಲೆ 317C ಇದರ ಜಿಲ್ಲಾ ಕಾರ್ಯಕ್ರಮ ‘ಲಯನ್ಸ್ ಕ್ರಿಸ್ತ ಪರ್ಭ 2025’ ಇದರ ಆಮಂತ್ರಣ ಪತ್ರಿಕೆಯನ್ನು ವಲಯ 3ರ ವಲಯ ಅಧ್ಯಕ್ಷ ಲಯನ್ ವಲೇರಿಯನ್ ನೊರೋನ್ನ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಮೈದಾನದಲ್ಲಿ ಸಂಜೆ 6 ಗಂಟೆಗೆ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ಲಯನ್ಸ್ ಕ್ರಿಸ್ತ ಪರ್ಭ 2025 ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದು, ಪ್ರಥಮ ಉಪ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ದ್ವಿತೀಯ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ ಸಹಿತ ಹಲವು ಲಯನ್ಸ್ ನಾಯಕರುಗಳು ಮತ್ತು ಸಮಾಜದ ಗಣ್ಯ ಅತಿಥಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ, ತೊಟ್ಟo ಚರ್ಚಿನ ಪ್ರಧಾನ ಧರ್ಮಗುರುಗಳಾದ ವoದನೀಯ ಫಾ. ಡೆನ್ನಿಸ್ ಡೆಸಾ ಕ್ರಿಸ್ಮಸ್ ಸಂದೇಶ ನೀಡಲಿದ್ದಾರೆ.
ಕ್ರಿಸ್ಮಸ್ ಪರ್ಭ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ನೃತ್ಯ ರೂಪಕ, ಕ್ರಿಸ್ಮಸ್ ಗೋಧಲಿ, ಮಿನುಗುವ ನಕ್ಷತ್ರಗಳು, ಕ್ರಿಸ್ಮಸ್ ಟ್ರೀ, ಕ್ಯಾರೆಲ್ಸ್, ಸಾoತಾ ಕ್ಲಾಸ್, ಕ್ರಿಸ್ಮಸ್ ತಿಂಡಿ ತಿನಿಸುಗಳು ಇರಲಿವೆ. ಪ್ರತಿಷ್ಠಿತ ಸಂಗೀತಕಾರರಿಂದ ಸಂಗೀತ ಸಂಜೆ ಕಾರ್ಯಕ್ರಮವು ಜರುಗಲಿದೆ ಎಂದು ಜಿಲ್ಲಾ ಲಯನ್ಸ್ ಇದರ ಕ್ರಿಸ್ಮಸ್ ಪ್ರಧಾನ ಸಂಯೋಜಕರಾಗಿರುವ ಲಯನ್ ಜೋನ್ ಫೆರ್ನಾಂಡಿಸ್, ಸಂಯೋಜಕರಾಗಿರುವ ಲಯನ್ ಇರ್ವಿನ್ ಡಿಸೋಜಾ ಮತ್ತು ಲಯನ್ ಮೈಕಲ್ ಡಿಸೋಜಾ ತಿಳಿಸಿದ್ದಾರೆ.





